ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಟೋ ಚಾಲಕರ ದೌರ್ಜನ್ಯ ಮಿತಿಮೀರುತ್ತಿದೆ. ಮಹಿಳೆಯರು ಮಕ್ಕಳು ಎನ್ನದೆ ಆಟೋ ಚಾಲಕರಿಂದ ರೌಡಿಸಂ ನಡೆಸಲಾಗುತ್ತಿದೆ. ಬೇಕಾಬಿಟ್ಟಿ ದರ ಫಿಕ್ಸ್ ಮಾಡಿ ಆಟೋ ಚಾಲನೆ ಮಾಡುತ್ತಿದ್ದಾರೆ. ಕೇಳಿದಷ್ಟು ಹಣ ಕೊಡಲಿಲ್ಲ ಅಂದ್ರೆ ಹೆಣ್ಣುಮ ಕ್ಕಳು ಎನ್ನುವುದನ್ನೂ ನೋಡದೇ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುವುದು,
ಬಾಯಿಗೆ ಬಂದಂತೆ ಮಾತನಾಡುವುದು ಕಾಮನ್ ಎನ್ನುವಂತಾಗಿದೆ. ಇದೀಗ ಪ್ರಯಾಣಿಕ ತಾನು ಹೇಳಿದ ಲೋಕೇಶನ್‌ಗೆ ಇಳಿದಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕುಟುಂಬದ ಎದುರಲ್ಲೇ ಅವಾಚ್ಯಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾನೆ.
ಈ ವೇಳೆ ಸಂಯಮದಿಂದ ವರ್ತಿಸಿರುವ ಪ್ರಯಾಣಿಕ ಆದರೂ ನಡು ರಸ್ತೆಯಲ್ಲಿ ಕುಟುಂಬಸ್ಥರ ಎದುರಲ್ಲೇ ಕೆಟ್ಟ ಶಬ್ದಗಳಿಂದ ನಿಂದಿಸಿರುವ ಆಟೋ ಚಾಲಕ. ಕಂಟ್ರೋಲ್ ಮಾಡಲು ಪ್ರಯತ್ನ ಪಟ್ಟರೂ ಸುಮ್ಮನಾಗದ ಆಸಾಮಿ. ಘಟನೆ ನಡೆದ ಸ್ಥಳದ ಬಗ್ಗೆ ಪ್ರಯಾಣಿಕ ಮಾಹಿತಿ ನೀಡಿಲ್ಲವಾದರೂ ಬೆಂಗಳೂರು ಪೊಲೀಸರಿಗೆ ಟ್ವಿಟರ್ ಎಕ್ಸ್ ನಲ್ಲಿ ಟ್ಯಾಗ್ ಮಾಡಿ ಆಟೋ ಚಾಲಕನ ವಿರುದ್ಧ ಕ್ರಮ ಆಗ್ರಹಿಸಿದ್ದಾನೆ.