ವಿಜಯಸಾಕ್ಷಿ ಸುದ್ದಿ, ಗದಗ: ಕಪ್ಪೋತ್ತಗಿರಿ ಸಾಹಿತ್ಯ ವೇದಿಕೆಯು ಪ್ರತೀ ವರ್ಷ ಕೊಡಮಾಡುವ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು 2025-2026ನೇ ಸಾಲಿನಲ್ಲಿ ಎಸ್.ಎಸ್.ಕೆ. ಶ್ರೀ ಜಗದಂಬಾ ಶಿಕ್ಷಣ ಸಂಸ್ಥೆಯ ವಿಜ್ಞಾನ ಶಿಕ್ಷಕಿ ಭಾಗ್ಯಾ ಬೊಮ್ಮಸಾಗರ ಅವರಿಗೆ ಕೊಡಮಾಡಿದ್ದಾರೆ.
ಶ್ರೀ ವಿದ್ಯಾದಾನ ಸಮಿತಿಯ ಸಭಾಂಗಣದಲ್ಲಿ ಕಪ್ಪೋತ್ತಗಿರಿ ಸಾಹಿತ್ಯ ವೇದಿಕೆಯ ಸಂಸ್ಥಾಪಿಕೆಯಾಗಿರುವ ಚಂದ್ರಕಲಾ ಇಟಗಿಮಠ ಅವರ ಅಧ್ಯಕ್ಷತೆಯಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಎಸ್.ಎಸ್.ಕೆ. ವಿದ್ಯಾಸಂಸ್ಥೆಯ ಚೇರ್‌ಮನ್ ಗೋವಿಂದರಾಜ ಬಸವಾ, ವೈಸ್ ಚೇರ್‌ಮನ್ ದತ್ತು ಪವಾರ, ಸಂಸ್ಥೆಯ ಅಧ್ಯಕ್ಷ ಲೋಕನಾಥ ಕಬಾಡಿಯವರು ಪ್ರಶಸ್ತಿ ವಿಜೇತ ಶಿಕ್ಷಕಿಯನ್ನು ಅಭಿನಂದಿಸಿ ಶುಭಕೋರಿದರು.



