ಶಿಕ್ಷಣದಿಂದ ವ್ಯಕ್ತಿತ್ವ ವಿಕಸನ : ಶರಣಬಸಪ್ಪ ಗುಡಿಮನಿ

0
Award from B.G.Annigeri Guru's Pratibha Foundation-4
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಶಿಕ್ಷಣದಿಂದ ವ್ಯಕ್ತಿ ಸುಶಿಕ್ಷಿತನಾಗಬಲ್ಲ. ಶಿಕ್ಷಣದಿಂದ ವ್ಯಕ್ತಿತ್ವ ವಿಕಸನ ಉನ್ನತ ಸಾಧನೆಗೆ ಮುನ್ನುಡಿಯಾಗಬಲ್ಲದು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಗದಗ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಅಭಿಪ್ರಾಯಪಟ್ಟರು.

Advertisement

ಅವರು ಮಂಗಳವಾರ ಗದುಗಿನ ರಾಜೀವಗಾಂಧಿ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪ್ರೇಮಿ, ತ್ಯಾಗಜೀವಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನವು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದ ಗದಗ ತಾಲೂಕಿನ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಸರಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸರಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿವೆ. ಖಾಸಗಿ ಹೈಟೆಕ್ ಶಾಲೆಗಳಿಗಿಂತಲೂ ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಲಭ್ಯವಾಗುತ್ತಿರುವದು ಬಹಳಷ್ಟು ಸಂತೋಷದ ಸಂಗತಿ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಲ್.ಬಿ. ಕಾಲವಾಡ ಸಂದರ್ಭೋಚಿತವಾಗಿ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ಹಾಗೂ ಉಪಾಧ್ಯಕ್ಷ ಶಂಕ್ರಪ್ಪ ಅಣ್ಣಿಗೇರಿ ಪ್ರತಿಷ್ಠಾನದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.

ಶಾಲೆಯ ವಿದ್ಯಾರ್ಥಿಗಳಾದ ಲಕ್ಷ್ಮಿ ಪಂಚಾಕ್ಷರಿ ಕೊಪ್ಪದ, ಪ್ರೀತಿ ಜಗದೀಶ ಅಂಬಿಗೇರ, ದೇವರಾಜ ಹಿರೇಕುರುಬರ, ಖಾನು ಇರಕಲ್, ದಾವುದ್ ಮುಲ್ಲಾ ಅವರಿಗೆ ಮುಖ್ಯ ಅತಿಥಿಗಳು ಸೇರಿದಂತೆ ಪ್ರತಿಷ್ಠಾನದ ಪದಾಧಿಕಾರಿಗಳು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.

ಸಮಾರಂಭದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಶಿವಾನಂದ ಕತ್ತಿ, ಸಿದ್ಧಣ್ಣ ಕವಲೂರ, ಕೃಷ್ಣಾ ಆಟದ, ನೇಹಾ ಖಟವಟೆ, ರೇಖಾ ಹುಡೇದ ಉಪಸ್ಥಿತರಿದ್ದರು. ಮಧು ಗಂಗಪ್ಪನವರ ಸಂಗಡಿಗರು ಪ್ರಾರ್ಥಿಸಿದರು, ಪಿ.ಎಸ್. ಕರೇಕುಲದ ಸ್ವಾಗತಿಸಿದರು. ಕೊನೆಗೆ ವೈ.ಎಸ್.ಬಮ್ಮನಾಳ ವಂದಿಸಿದರು.


Spread the love

LEAVE A REPLY

Please enter your comment!
Please enter your name here