HomeGadag Newsಸಾಧಕಿಯರಿಗೆ ಪ್ರಶಸ್ತಿ ಪ್ರದಾನ

ಸಾಧಕಿಯರಿಗೆ ಪ್ರಶಸ್ತಿ ಪ್ರದಾನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಕಳಸಾಪುರದ ಕಪ್ಪತ್ತಗಿರಿ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಮಹಿಳಾ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ಪ್ರದಾನ, ಸಂಪಾದಿತ ಕೃತಿ ಬಿಡುಗಡೆ, ಗೌರವ ಸಮ್ಮಾನ, ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಿತು.

ಸಮ್ಮೇಳನದ ಸರ್ವಾಧ್ಯಕ್ಷರಾದ ರತ್ನಾ ಬದಿ ಅವರನ್ನು ಗದಗ ನಗರಕ್ಕೆ ಬರಮಾಡಿಕೊಳ್ಳಲಾಯಿತು. ಮೆರವಣಿಗೆಗೆ ವಿದ್ಯಾವತಿ ಗಡಗಿ ಹಾಗೂ ಎಸ್.ಬಿ. ಹೂಗಾರ, ಮಲ್ಲಿಕಾರ್ಜುನ ಖಂಡಮ್ಮನವರ, ಎ.ಎಸ್. ಮಕಾನದಾರ ಚಾಲನೆ ನೀಡಿದರು.

ಓಂಕಾರಗಿರಿ ಹಿರೇಮಠದ ಪೂಜ್ಯ ಫಕ್ಕೀರೇಶ್ವರ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಗಣ್ಯರಾದ ಶರದ್‌ರಾವ ಹುಯಿಲಗೋಳ ಘನ ಉಪಸ್ಥಿತಿ ವಹಿಸಿದ್ದರು. ಅಧ್ಯಕ್ಷತೆಯನ್ನು ಕಪ್ಪತ್ತಗಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಕಲಾ ಎಂ.ಇಟಗಿಮಠ ವಹಿಸಿದ್ದರು. ಡಾ. ಭೀಮಸಿಂಗ್ ರಾಠೋಡ ಕಾರ್ಯಕ್ರಮ ಉದ್ಘಾಟಿಸಿದರು.

ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಭೂಮಿ ತೂಕದಾಕೆ ಪುಸ್ತಕ ಬಿಡುಗಡೆ ಮಾಡಿದರು. ಸುರೇಶ ಕುಂಬಾರ ಪುಸ್ತಕ ಮಳಿಗೆ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಎಸ್.ಪಿ. ಹಿರೇವ್ಮಠ, ವಿ.ಎಂ. ಹಿರೇಮಠ ಪಾಲ್ಗೊಂಡಿದ್ದರು. ವಿಚಾರ ಸಂಕಿರಣದಲ್ಲಿ ಶಿವಲೀಲಾ ಧನ್ನಾ ಆಶಯ ನುಡಿಗಳನ್ನಾಡಿದರು.

ಸುಜ್ಞಾನಿ ಪಾಟೀಲ ಸ್ವಾಗತಿಸಿದರು. ಡಾ. ನಿಂಗಪ್ಪ ಮಾದಣ್ಣವರು ಜನಪದ ಸಾಹಿತ್ಯದಲ್ಲಿ ಮಹಿಳೆ ವಿಷಯದ ಬಗ್ಗೆ ಉಪನ್ಯಾಸ ನೀಡಿದರೆ, ಉಪನ್ಯಾಸಕಿ ರೇಖಾ ಒಡಕಣ್ಣವರ ಪ್ರಸ್ತುತ ಸಮಾಜದಲ್ಲಿ ಮಹಿಳೆಯರ ಪಾತ್ರದ ಕುರಿತು ಮಾತನಾಡಿದರು.

ಸುರೇಶ ಕುಂಬಾರ, ಎ.ಎನ್. ಗುಬ್ಬಿ, ಮುನ್ನಾ ಕಲ್ಮನಿ, ಸತ್ಯಪ್ಪನವರ, ಸಂಗಮೇಶ ತಮ್ಮನಗೌಡ್ರ, ಚನ್ನಬಸಯ್ಯ ಹಿರೇವ್ಮಠ, ಮಲ್ಲಿಕಾರ್ಜುನ ಖಂಡಮ್ಮನವರ ಇವರನ್ನು ಸನ್ಮಾನಿಸಲಾಯಿತು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಪಂಚಯ್ಯ ಹಿರೇಮಠ ವಹಿಸಿದ್ದರು. ಮಖ್ಯ ಅಥಿತಿಗಳಾಗಿ ಗಣಪತಿ ಹೆಗಡೆ, ಪ್ರವೀಣ ಕನ್ಯಾಳ ಪಾಲ್ಗೊಂಡಿದ್ದರು. ಗೋಷ್ಠಿ ಎರಡರ ಸ್ವಾಗತವನ್ನು ನಾಗರತ್ನ ಹೊಸಮನಿ, ನಿರ್ವಹಣೆಯನ್ನು ಲಕ್ಷ್ಮಿ ಬರದೂರವ್ಮಠ, ಮಾಲಾ ಪಾಟೀಲ ನರಗುಂದ, ವಂದನಾರ್ಪಣೆಯನ್ನು ಮಮತಾ ದೊಡ್ಡಮನಿ ಮಾಡಿದರು. ಶಿವಾನಂದ ಮಾಯಪ್ಪನವರ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮಹಾಂತೇಶ ಬೇರಗಣ್ಣವರು ಮಾತನಾಡಿದರು.

ಸಭಾ ಕಾರ್ಯಕ್ರಮದಲ್ಲಿ ಸರೋಜಾ ಹುಯಿಲಗೋಳ ಸ್ವಾಗತಿಸಿದರು. ಮಾಲಾ ಇಟಗಿಮಠ, ಸೌಮ್ಯ ಹಿರೇಮಠ, ಈಶ್ವರಿ ಮಳಿಮಠ ನಿರ್ವಹಿಸಿದರು. ಈಶ್ವರ ಕುರಿ, ಜ್ಯೋತಿ ಮ್ಯಾಗೇರಿ ನಿರೂಪಿಸಿದರು.

ಯಶೋಧಾ ಬಮ್ಮನಕಟ್ಟಿ, ಚನ್ನಮ್ಮ ಹೇಮಗಿರಿವ್ಮಠ, ಜ್ಯೋತಿ ನಾಯಕ, ಡಾ. ಸುವರ್ಣ ನಿಡಗುಂದಿ, ವೀಣಾ ಹೇಮಂತಗೌಡ ಪಾಟೀಲ, ಲಕ್ಷ್ಮವ್ವ ಎಲ್ಲಪ್ಪ ಬಳ್ಳಾರಿ, ರೇಣುಕಾ ಜಗಂಡಭಾವಿ, ನೀಲಮ್ಮ ಕಾಳಪ್ಪ ಸೋಮಣ್ಣವರ, ಸುಮಂಗಲಾ ಸಂಕಣ್ಣವರ, ಶಾಂತಾ ಇನಾಮತಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!