ಸಾಧಕರಿಗೆ ಪ್ರಶಸ್ತಿ ಪ್ರದಾನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗುರೂಜಿ ಯುವ ಕ್ರೀಡಾ ಹಾಗೂ ಸಾಂಸ್ಕೃತಿಕ ಕಲಾ ಸಂಸ್ಥೆಯ 3ನೇ ವರ್ಷದ ವಾರ್ಷಿಕೋತ್ಸವ, `ಗದಗ ಗದ್ದುಗೆ ಗೌರವ-2025’ ಪ್ರಶಸ್ತಿ ಪ್ರದಾನ, ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರರ ಜಯಂತ್ಯುತ್ಸವ ಹಾಗೂ ಶ್ರೀಗುರು ಲಿ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಜಯಂತ್ಯುತ್ಸವ ಕಾರ್ಯಕ್ರಮಗಳು ಜರುಗಿದವು.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ.ಹಿರೇಮಠ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗುರೂಜಿ ಯುವ ಕ್ರೀಡಾ ಹಾಗೂ ಸಾಂಸ್ಕೃತಿಕ ಕಲಾ ಸಂಸ್ಥೆಯು ಇಂತಹ ಅತ್ಯುತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಲಾವಿದರಿಗೆ ಪ್ರೋತ್ಸಾಹ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯವಾಗಿದೆ. ಈ ಸಂಸ್ಥೆಯು ಇನ್ನೂ ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಶಿವುಸ್ವಾಮಿ ಮ್ಯಾಗಳಮಠ ಹಾಗೂ ಕಲಾತಂಡದವರಿಂದ ಸುಗಮ ಸಂಗೀತ, ಅಕ್ಷತಾ ಹಿರೇಮಠರಿಂದ ಹಿಂದೂಸ್ತಾನಿ ಸಂಗೀತ, ಸಂತೋಷ ನಾಮದೇವ ತಂಡ, ಬಾಬು ಶಿದ್ಲಿಂಗ್ ಹಾಗೂ ತಂಡ, ರಾಹುಲ ರಾಠೋಡ ಹಾಗೂ ತಂಡ, ಪೂರ್ವಾಚಾರಿ ಬಡಿಗೇರ ಮತ್ತು ವಿನಾಯಕ ಇವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಚಯ್ಯ ಎಸ್.ಹೊಸಮಠ ವಹಿಸಿದ್ದರು. ಪ್ರೊ. ಕುಮಾರ ವಡೆಯರ ಉಪನ್ಯಾಸಕರಾಗಿ, ಅಡವೀಂದ್ರಸ್ವಾಮಿಮಠದ ಧರ್ಮದರ್ಶಿಗಳಾದ ವೇ. ಮಹೇಶ್ವರ ಸ್ವಾಮಿಗಳು, ವಿಜಯಕುಮಾರ ಹಿರೇಮಠ, ಸೋಮಶೇಖರ ಚಿಕ್ಕಮಠ, ಶ್ರೀರಾಮ ಸೇನಾದ ರಾಜು ಖಾನಪ್ಪನವರ, ಪ್ರಭಾವತಿ ಬೆಳವಣಕಿಮಠ, ಸುರೇಶ ಬಿ.ಹೊಸಮನಿ ಉಪಸ್ಥಿತರಿದ್ದರು.

`ಸಂಗೀತ ಸಂಪತ್ತು’ ಪ್ರಶಸ್ತಿಗೆ ಭಾಜನರಾದ ವಿಠ್ಠಲ ಪಡಸಲಗಿ, `ಸಾಹಿತ್ಯ ಸಂಪತ್ತು’ ಪ್ರಶಸ್ತಿಗೆ ಭಾಜನರಾದ ವ್ಹಿ.ವ್ಹಿ. ಹಿರೇಮಠ, `ಆರೋಗ್ಯ ಸಂಪತ್ತು’ ಪ್ರಶಸ್ತಿಗೆ ಭಾಜನರಾದ ಡಾ. ಸುಭಾಸ ವಿ.ಶಿವನಗೌಡರ, `ಸಮಾಜ ಸಂಪತ್ತು’ ಪ್ರಶಸ್ತಿಗೆ ಭಾಜನರಾದ ಮಹೇಶ ರೋಖಡೆ, `ಗುರು ಸಂಪತ್ತು’ ಪ್ರಶಸ್ತಿ ಭಾಜನರಾದ ಪಿ.ಎ. ಕುಲಕರ್ಣಿ, `ಕಾಯಕ ಸಂಪತ್ತು’ ಪ್ರಶಸ್ತಿ ಭಾಜನರಾದ ಜನಾರ್ಧನ ನಾಯರಿ, `ಸುದ್ದಿ ಸಂಪತ್ತು’ ಪ್ರಶಸ್ತಿ ಭಾಜನರಾದ ಲಕ್ಷ್ಮಣ ವಗ್ಗಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.


Spread the love

LEAVE A REPLY

Please enter your comment!
Please enter your name here