ವಿನಾಯಕ ಬಾಸ್ಮಿಗೆ ಪ್ರಶಸ್ತಿ

0
vinayaka
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಿರ್ಮಲ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಮುಂಡರಗಿ, ಗಮಕ ಕಲಾ ಪರಿಷತ್, ನವರಸ ಕಲಾ ಸಂಘ, ನಯನತಾರಾ ಕಲಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಡಾ. ಪರಮಪೂಜ್ಯ ಶ್ರೀ ಪುಟ್ಟರಾಜ ಗವಾಯಿಗಳ ಸ್ಮರಣೋತ್ಸವ ನಿಮಿತ್ಯ ಕಾವ್ಯ-ಕುಂಚ-ಗಾನ ನಮನ ಕಾರ್ಯಕ್ರಮವು ಸಿ.ಎಸ್. ಪಾಟೀಲ್ ಸಮೂಹ ಶಾಲೆಗಳ ಭವನದ ಮಾಡೆಲ್ ಹೈಸ್ಕೂಲ್‌ನಲ್ಲಿ ಜರಗಿತು.

Advertisement

ಸಮಾರಂಭದಲ್ಲಿ ಬೆಟಗೇರಿಯ ಎಸ್‌ಎಸ್‌ಕೆ ಶ್ರೀ ಜಗದಂಬಾ ಶಾಲೆಯ ವಿದ್ಯಾರ್ಥಿ ವಿನಾಯಕ ಬಾಸ್ಮಿ ಪರಮಪೂಜ್ಯ ಡಾ. ಪುಟ್ಟರಾಜ ಗವಾಯಿಗಳ ಭಾವಚಿತ್ರ ರಚಿಸಿ ಪ್ರಶಸ್ತಿ ಪಡೆದಿದ್ದಾನೆ. ಇವರಿಗೆ ತರಬೇತಿ ನೀಡಿದ ಡಾ. ಜಾಕೀರಹುಸೇನ್ ಕೊರ್ಲಹಳ್ಳಿ ಮತ್ತು ವಿದ್ಯಾರ್ಥಿಗೆ ಎಸ್‌ಎಸ್‌ಕೆ ಶ್ರೀ ಜಗದಂಬಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಲೋಕನಾಥ್ ಬಿ.ಕಬಾಡಿ, ಜಿ.ವಿ. ಬಸವಾ ಹಾಗೂ ವಾಯ್ಸ್ ಚೇರಮನ್ ದತ್ತು ಪವಾರ್ ಮತ್ತು ಕಮಿಟಿಯ ಸರ್ವ ಸದಸ್ಯರು ಹಾಗೂ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಡಿ. ಬೆನೆಕಲ್, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಸ್. ಹವಳದ, ದೈಹಿಕ ಶಿಕ್ಷಕರಾದ ರಾಘು ದೊಡ್ಡಮನಿ ಹಾಗೂ ಶಾಲೆಯ ಸಿಬ್ಬಂದಿ ವರ್ಗ, ಶಿಕ್ಷಕರು ಅಭಿನಂದಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here