HomeGadag Newsವಿದ್ಯಾರ್ಥಿಗಳು ಇಷ್ಟಪಟ್ಟು ಕಲಿಯಬೇಕು : ಡಾ.ಅನುಪಮಾ ಪಾಟೀಲ

ವಿದ್ಯಾರ್ಥಿಗಳು ಇಷ್ಟಪಟ್ಟು ಕಲಿಯಬೇಕು : ಡಾ.ಅನುಪಮಾ ಪಾಟೀಲ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ವಿದ್ಯಾರ್ಥಿಗಳು ಕಷ್ಟಪಟ್ಟು, ಇಷ್ಟಪಟ್ಟು ಅಭ್ಯಾಸ ಮಾಡಿದರೆ ಭವಿಷ್ಯದಲ್ಲಿ ತಾವು ಇಷ್ಟಪಟ್ಟಿದ್ದನ್ನು ಸಾಧಿಸಲು ಸಾಧ್ಯವಿದೆ. ಆದ್ದರಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಕಲಿಯುವದನ್ನು ಮಾತ್ರ ಮಾಡಲಿ ಎಂದು ವೈದ್ಯೆ ಡಾ.ಅನುಪಮಾ ಪಾಟೀಲ ಅಭಿಪ್ರಾಯಪಟ್ಟರು.
ಅವರು ಸೋಮವಾರ ಗದಗ ತಾಲೂಕಿನ ಹುಲಕೋಟಿ ಗ್ರಾಮದ ಕೆ.ಎಚ್. ಪಾಟೀಲ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪ್ರೇಮಿ, ತ್ಯಾಗಜೀವಿ ಶ್ರೀ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನವು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಜೀವನದಲ್ಲಿ ಹಣ ಮುಖ್ಯವಲ್ಲ, ಗುಣ ಮುಖ್ಯ. ಅಂತಹ ಗುಣ ಲಕ್ಷಣಗಳು ಶಿಕ್ಷಣದಿಂದ ಮಾತ್ರ ಬರಲು ಸಾಧ್ಯ. ವಿದ್ಯಾರ್ಥಿಗಳು ಚೆನ್ನಾಗಿ ಕಲಿಯಬೇಕು, ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಅಂದಾಗ ಮಾತ್ರ ಸದೃಢ ಆರೋಗ್ಯ ರೂಪುಗೊಳ್ಳುವದು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಎಸ್.ಎ. ಖಾನ್ ಮಾತನಾಡಿ, ಪ್ರತಿಷ್ಠಾನವು ನಮ್ಮ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸಿದ್ದು ಇತರೆ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಿದಂತಾಗಿದೆ ಎಂದರು.
ವೇದಿಕೆಯ ಮೇಲೆ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ, ಉಪಾಧ್ಯಕ್ಷ ಎಸ್.ಜಿ. ಅಣ್ಣಿಗೇರಿ, ಕಾರ್ಯದರ್ಶಿ ಶಿವಣ್ಣ ಕತ್ತಿ ಸಂದರ್ಭೋಚಿತವಾಗಿ ಮಾತನಾಡಿದರು.
ಶಾಲೆಯ ವಿದ್ಯಾರ್ಥಿಗಳಾದ ಆಸ್ಮಾ ಹರ್ಲಾಪೂರ, ಸ್ನೇಹಾ ಮಾಲಿಪಾಟೀಲ, ಸಾವಿತ್ರಿ ಹೊಸಮನಿ, ಶೃತಿ ತೋರಗಲ್ಲ, ವಿದ್ಯಾಶ್ರೀ ಲಕ್ಕಣ್ಣವರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪಿ.ಕೆ. ಅವರಡ್ಡಿ ಸ್ವಾಗತಿಸಿದರು ವಿ.ಬಿ. ಕಾರಿಕಾಯಿ ನಿರೂಪಿಸಿದರು. ಪಿ.ಪಿ. ಟಿಕಾರೆ ವಂದಿಸಿದರು.
ಬೆಳಹೊಡದಲ್ಲಿ: ಗದಗ ತಾಲೂಕಿನ ಬೆಳಹೊಡ ಗ್ರಾಮದ ಪಿ.ವ್ಹಿ. ಹೊಸಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರದ ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯ ಪಿ.ವ್ಹಿ. ಮಲ್ಲನಗೌಡ್ರ ವಹಿಸಿದ್ದರು.
ವಿದ್ಯಾರ್ಥಿಗಳಾದ ಸಕ್ಕೂಬಾಯಿ ಕಡೆಮನಿ, ಸರಸ್ವತಿ ಯರಗುದ್ದಿ, ರುದ್ರಗೌಡ ಮಾಳವಾಡ, ಮಹ್ಮದ್‌ಯಾಸೀನ್ ಹೊಂಬಳ, ಅಶ್ವಿನಿ ಕೆರಿಯವರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವೇದಿಕೆಯ ಮೇಲೆ ವೇದಿಕೆಯ ಮೇಲೆ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ, ಉಪಾಧ್ಯಕ್ಷ ಎಸ್.ಜಿ. ಅಣ್ಣಿಗೇರಿ, ಕಾರ್ಯದರ್ಶಿ ಶಿವಣ್ಣ ಕತ್ತಿ ಇದ್ದರು.
ವಿದ್ಯಾ ಕಾಲವಾಡ ಪ್ರಾರ್ಥಿಸಿದರು. ಎಂ.ಎಂ. ಧಾರವಾಡ ಸ್ವಾಗತಿಸಿದರು. ಶ್ರೀಕಾಂತ ಭಜಂತ್ರಿ ನಿರೂಪಿಸಿದರು. ಎಸ್.ಸಿ.ಲಮಾಣಿ ವಂದಿಸಿದರು. ನೇಹಾ ಖಟವಟೆ, ಲಕ್ಷ್ಮಮ್ಮ ಶಿರೂರ ಉಪಸ್ಥಿತರಿದ್ದರು.
ಅಂತೂರಬೆಂತೂರ ಗ್ರಾಮದ ಸರಕಾರಿ ಪ್ರೌಢಶಾಲೆ, ಶ್ಯಾಗೋಟಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ನಾಳೆ ಯಾವ ಶಾಲೆ
ಜುಲೈ 24ರಂದು ಬುಧವಾರ ಮುಂಜಾನೆ 10.30ಕ್ಕೆ ಗದಗ ತಾಲೂಕಿನ ಸೊರಟೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ದಲ್ಲಿ, ಮುಂಜಾನೆ 11.30ಕ್ಕೆ ಯಲಿಶಿರೂರ ಗ್ರಾಮದ ಸರಕಾರಿ ಗರ್ಲ್ಸ್ ಹೈಸ್ಕೂಲ್‌ನಲ್ಲಿ, ಮಧ್ಯಾಹ್ನ 2 ಗಂಟೆಗೆ ಶಿರುಂಜದ ಸರಕಾರಿ ಗರ್ಲ್ಸ್ ಹೈಸ್ಕೂಲ್‌ನಲ್ಲಿ ಹಾಗೂ ಮಧ್ಯಾಹ್ನ 3 ಗಂಟೆಗೆ ನಾಗಾವಿಯ ಸರಕಾರಿ ಹೈಸ್ಕೂಲ್‌ನಲ್ಲಿ ಪ್ರತಿಭಾ ಪುರಸ್ಕಾರ ನಡೆಯಲಿದೆ.

Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!