ವಿಜಯಸಾಕ್ಷಿ ಸುದ್ದಿ, ಗದಗ : ಮಾರ್ಚ್ 6ರಂದು ಜರುಗಲಿರುವ ಕರ್ನಾಟಕದ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವ ಸಮಾರಂಭದಲ್ಲಿ 11 ಸ್ನಾತಕೋತ್ತರ ಸಾಧಕರಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುತ್ತಿದೆ.
ಎಂ.ಬಿ.ಎ ವಿಭಾಗದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಓಜಸ್ವಿ ಮಲ್ಲಾಡದ, ಎಂ.ಎ (ಆರ್.ಡಿ.ಪಿ.ಆರ್.) ವಿಭಾಗದ ಲಿಂಗರಾಜು ಎಚ್.ಎಮ್, ಎಂ.ಎ (ಪಿ.ಎ.) ವಿಭಾಗದ ಭೀಮಪ್ಪ ಚಲವಾದಿ, ಎಂ.ಎಸ್ಸಿ. (ಜಿ.ಐ.ಎಸ್ )ವಿಭಾಗದ ಯಲ್ಲಾಲಿಂಗ ಹೊಸಮನಿ, ಎಂ.ಎಸ್ಸಿ (ಎಫ್‌ಎಸ್‌ಟಿ) ವಿಭಾಗದ ನಿಶಾ ಎಂ, ಎಂಪಿಎಚ್ ವಿಭಾಗದ ಶರೋನ್ ಅನ್ನಾ ಥಾಮಸ್, ಎಂ ಎಸ್ ಡಬ್ಲ್ಯೂ ವಿಭಾಗದ ಅಕ್ಷತಾ ಸಾನಿಕೊಪ್ಪ ಹಾಗೂ ಕೀರ್ತಿ ಗಾಮನಗಟ್ಟಿ, ಎಂಎ (ಡಿಇ)ವಿಭಾಗದ ಜಗದೀಶ ಎನ್.ಬಳಿಗಾರ, ಎಂ ಕಾಮ್ ವಿಭಾಗದ ಲತಾ ಕಡಾರ, ಎಂ.ಎಸ್‌ಸಿ (ಸಿ.ಎಸ್.) ವಿಭಾಗದ ಪವಿತ್ರಾ ಶೇಟ ಇವರುಗಳಿಗೆ ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.