ವಿಜಯಸಾಕ್ಷಿ ಸುದ್ದಿ, ಗದಗ : ಬೆಂಗಳೂರಿನ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ಜುಲೈ 5, 6 ಹಾಗೂ 7ರಂದು ಫೋಟೋ ಟುಡೆ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ನಡೆಯಲಿದೆ. ಕರ್ನಾಟಕ ವೀಡಿಯೋ ಮತ್ತು ಫೋಟೋ ಅಸೊಶಿಯೇಶನ್ ಮತ್ತು ಬೈಸೆಲ್ ಇಂಟ್ರಾಕ್ಷನ್ ಪ್ರೈ.ಲಿ ಅವರ ಸಹಯೋಗದೊಂದಿಗೆ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ವಸ್ತು ಪ್ರದರ್ಶನದಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ನೂರಾರು ಕಂಪನಿಗಳು ಭಾಗವಹಿಸಲಿವೆ. ಉಚಿತ ಕ್ಯಾಮರಾ ಸರ್ವಿಸ್ ಹಾಗೂ ಛಾಯಾಗ್ರಾಹಕರಿಗೆ ಉಪಯುಕ್ತ ಕಾರ್ಯಾಗಾರಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಡೆಯಲಿವೆ.
ಇದೇ ಸಂದರ್ಭದಲ್ಲಿ ಗದಗ ಜಿಲ್ಲೆಯಿಂದ ಚೆನ್ನಯ್ಯ ಹಿರೇಮಠ, ಮುಂಡರಗಿ ತಾಲೂಕಿನ ಕಾಶಿನಾಥ ಕಲಬುರ್ಗಿ, ನರಗುಂದ ತಾಲುಕಿನ ಶಂಭುಲಿಂಗ ಹಳಕಟ್ಟಿ ಇವರಿಗೆ ನಾಡಿನ ಛಾಯಾಗ್ರಹಣ ಕ್ಷೇತ್ರಕ್ಕೆ ದುಡಿದ ಶ್ರೇಷ್ಠ ಛಾಯಾಗ್ರಾಹಕರಿಗೆ ನೀಡುವ ಗೌರವ ಪ್ರಶಸ್ತಿ `ಕರ್ನಾಟಕ ಛಾಯಾ ರತ್ನ’ ಪಶಸ್ತಿ ಪ್ರದಾನ ಮಾಡಲಾಗುವುದು.
ಗದಗ ಜಿಲ್ಲೆಯ ಛಾಯಾಗ್ರಾಹಕನ್ನು ಗುರುತಿಸಿ ಪ್ರಶಸ್ತಿ ನೀಡಿದ ಕರ್ನಾಟಕ ವೀಡಿಯೋ ಮತ್ತು ಫೋಟೋ ಅಸೋಸಿಯೇಶನ್ಗೆ ಈ ಮೂಲಕ ಗದಗ ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಘ ಧನ್ಯವಾದ ತಿಳಿಸಿದೆ.



