ವಿಜಯಸಾಕ್ಷಿ ಸುದ್ದಿ, ಗದಗ : ಹುಲಕೋಟಿಯ ಕೆ.ಎಚ್. ಪಾಟೀಲ್ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಗಣಿತಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಸಂಗೀತಾ ಪ್ರಕಾಶ ಕಲಾಲ ಅವರು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾಗಿರುವ ಡಾ.ಹನಮೇಶ ವೈದ್ಯ ಅವರ ಮಾರ್ಗದರ್ಶನದಲ್ಲಿ `ಕಂಪ್ಯೂಟೇಶನ್ ಅನಾಲಿಸಿಸ್ ಆಫ್ ಹೀಟ್ ಆಂಡ್ ಮಾಸ್ ಟ್ರಾನ್ಸಫರ್ ಆಫ್ ನ್ಯಾನೋಪ್ಲೂಡ್ಸ್’ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಪ್ರಭಂದಕ್ಕೆ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.
ಸಂಗೀತಾ ಅವರಿಗೆ ಪ್ರಾಚಾರ್ಯರಾದ ಡಾ. ಶಿವಪ್ಪ ಕುರಿ, ಡಾ. ಸುಧಾ ಕೌಜಗಿರಿ, ಡಾ. ಉಲ್ಲಾಸ ಶೆಟ್ಟಿ, ಡಾ. ಅಪ್ಪಣ್ಣಾ ಹಂಜೆ, ಡಾ. ಲಕ್ಷö್ಮಣ ಮುಳಗುಂದ, ಸಹಾಯಕ ಪ್ರಾಧ್ಯಾಪಕರಾದ ಮಹಾನಂದಾ ಹಿರೇಮಠ, ಶ್ವೇತಾ ಪಾಲನಕರ, ಗುರು-ಹಿರಿಯರು, ಕುಟುಂಬ ವರ್ಗ, ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.