ಕಾರ್ಮಿಕ ಕಲ್ಯಾಣ ಸಂಸ್ಥೆ ವತಿಯಿಂದ ಸಾಧಕರಿಗೆ ಸನ್ಮಾನ

0
Awarded to achievers by Labor Welfare Organization
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕಾರ್ಮಿಕ ಕಲ್ಯಾಣ ಸಂಸ್ಥೆ ವತಿಯಿಂದ ದಾಸರ ಓಣಿಯ ಶಾಂತಾರಾಮ ಸಮುದಾಯ ಭವನದಲ್ಲಿ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭವನ್ನು ಯುವ ನಾಯಕ ಕೃಷ್ಣಗೌಡ ಎಚ್.ಪಾಟೀಲ ಉದ್ಘಾಟಿಸಿದರು.

Advertisement

ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಪರ್ತಕರ್ತರಾದ ವೆಂಕಟೇಶ ಇಮರಾಪೂರ, ಮಾಳಿಂಗರಾಯ ಪೂಜಾರ, ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಪ್ರಾಧಿಕಾರದ ನಿರ್ದೇಶಕ ಬಸವರಾಜ ಕಡೇಮನಿ, ಎಸ್‌ಎಸ್‌ಎಲ್‌ಸಿಯಲ್ಲಿ ಗದಗ ಜಿಲ್ಲೆಗೆ ಪ್ರಥಮ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ ಸಮೃದ್ಧಿ ಶ್ರೀಧರ ಶಿದ್ಲಿಂಗ ಹಾಗೂ ಇತರೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವೇದಿಕೆಯ ಮೇಲೆ ಕಾರ್ಮಿಕ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ ಇರ್ಫಾನ ಡಂಬಳ, ಉಪಾಧ್ಯಕ್ಷ ಶಂಕರಗೌಡ ಭರಮಗೌಡರ, ಗೌರವಾಧ್ಯಕ್ಷ ಝಡ್.ಡಿ. ಬೇಲೇರಿ, ಸಾಮಾಜಿಕ ಕಾರ್ಯಕರ್ತರಾದ ಗೀತಾ ಹಬೀಬ, ಕಟ್ಟಡ ನಿರ್ಮಾಣ ಕಾರ್ಮಿಕರ ಮಹಾಸಂಘದ ಅಧ್ಯಕ್ಷ ಮೆಹಬೂಬಖಾನ ಪಠಾಣ, ಹಿರಿಯರಾದ ಬಿ.ಎಚ್. ಪೂಜಾರ, ಬಾಪುಗೌಡ ಕರಿಸೋಮನಗೌಡ್ರ, ಚನ್ನವೀರಗೌಡ ಪಾಟೀಲ, ಮಹಮ್ಮದ ಯೂಸೂಫ ಬೇಪಾರಿ, ಕೆ.ಬಿ. ಕುಡಗುಂಟಿ, ಈಶ್ವರಪ್ಪ ಬಳ್ಳಾರಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಉಮರಫಾರುಕ ಹುಬ್ಬಳ್ಳಿ, ಅಲ್ಲಾಭಕ್ಷ ದೊಡ್ಡಮನಿ, ಇಬ್ರಾಹಿಂ ಹಳ್ಳಿಕೇರಿ, ನೂರಅಹ್ಮದ ಬಳ್ಳಾರಿ, ರಮೇಶ ಬಿಳೆಯಲಿ, ಗೌಸ ಬಳ್ಳಾರಿ, ರಫೀಕ ಧಾರವಾಡ, ಪ್ರವೀಣ ಹಾದಿಮನಿ, ಇಸ್ಮಾಯಿಲ್ ರೋಣದ, ಮೈನು ಗುಜಮಾಗಡಿ, ಸಿದ್ದು ಹಾದಿಮನಿ, ಲಿಯಾಖತ್ ಮುಲ್ಲಾ, ಇಮಾಮಸಾಬ ಕದಡಿ, ಮೋತಿಲಾಲ ಮಾಳಗಿಮನಿ, ಶಫಿ ಶಿದ್ದಿ, ಮೌಲಸಾಬ ಸದರಬಾಯಿ, ಚಾಂದಸಾಬ ಅಬ್ಬಿಗೇರಿ, ಖಾಜಾಸಾಬ ಗೋನಾಳ, ನೂರಅಹ್ಮದ ಶಿರಹಟ್ಟಿ, ಅಷ್ಪಾಕ ಕೊಪ್ಪಳ, ಬಸೀರ ಬಳ್ಳಾರಿ, ಮಂಜುನಾಥ ದುಂಡಸಿ, ಜಾವೇದ ಹೈದರ, ಖಾಜಾಸಾಬ ಗಬ್ಬೂರ, ಅನಿಲ ಜಾಧವ, ಮೆಹಬೂಬಸಾಬ ಮುಲ್ಲಾ, ದುರಗಪ್ಪ ಗುಡಿಮನಿ, ಜಾಕೀರ ಕಲಬುರ್ಗಿ, ಕಾರ್ಪೆಂಟರ ಶಿದ್ದಪ್ಪ, ಮುನ್ನಾ ಬೆಟಗೇರಿ, ಬಸವರಾಜ ಅರಮನಿ ಹಾಗೂ ಗದಗ ಜಿಲ್ಲೆಯ ಸಮಸ್ತ ಕಟ್ಟಡ ಕಾರ್ಮಿಕರು, ವಿದ್ಯಾರ್ಥಿಗಳ ಪಾಲಕರು ಹಾಜರಿದ್ದರು.

ಝಡ್.ಡಿ. ಬೇಲೇರಿ ಸ್ವಾಗತಿಸಿದರು. ನಾಶೀರ ಚಿಕೇನಕೊಪ್ಪ ನಿರೂಪಿಸಿದರು. ನಿಂಗಪ್ಪ ಕಟ್ಟಿಮನಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here