ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿಯಿಂದ ನಗರದ ಜಿಲ್ಲಾಡಳಿತ ಭವನದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳಿಗೆ (ಜಿಲ್ಲೆಯಲ್ಲಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಿಂದ ತಲಾ ಮೂರು ಮತಗಟ್ಟೆ ಅಧಿಕಾರಿಗಳಿಗೆ) ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಶಿರಹಟ್ಟಿ ವಿಧಾನ ಸಭಾ ಕ್ಷೇತ್ರ: ಸೂಗಿಹಾಳ ಅಂಗನವಾಡಿ ಕಾರ್ಯಕರ್ತೆ ಅಶ್ವಿನಿ ಅಮ್ನನವರ, ಬಿಜ್ಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಬಿ.ಜಿ. ಅಂಗಡಿ, ಗೋವನಾಳ ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಎಚ್.ಎಸ್. ಮರಿಲಿಂಗನಗೌಡರ.
ಗದಗ ವಿಧಾನ ಸಭಾ ಕ್ಷೇತ್ರ: ಮಲ್ಲಸಮುದ್ರ ಅಂಗನವಾಡಿ ಕಾರ್ಯಕರ್ತೆ ರೇಶ್ಮಾ ಮಾಬೂಸಾಬ ಮುಲ್ಲಾನವರ, ಗದಗ-ಬೆಟಗೇರಿ ನಗರದ ಎಲೆಕ್ಟ್ರಿಷಿಯನ್ ಶಿರಾಜ್ ಅಹ್ಮದ್ ಎಸ್.ಫಟ್ಟದ್, ಗದುಗಿನ ಅಂಗನವಾಡಿ ಕಾರ್ಯಕರ್ತೆ ಪರವೀನ್ ಬಾಬು ಎಸ್.ಅತ್ತಾರ.
ರೋಣ ವಿಧಾನಸಭಾ ಕ್ಷೇತ್ರ: ಗಜೇಂದ್ರಗಡ ಸರ್ಕಾರಿ ಪ್ರಾಥಮಿಕ ಶಾಲೆಯ ಸಹಶಿಕ್ಷಕರಾದ ಎಸ್.ಎಚ್. ಹಲಕುರ್ಕಿ, ಡಂಬಳದ ಅಂಗನವಾಡಿ ಕಾರ್ಯಕರ್ತೆ ಎಸ್.ಎಚ್. ಹಿರೇಮಠ, ಬೈರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಶಶಿಧರ ಆವಾರಿ.
ನರಗುಂದ ವಿಧಾನಸಭಾ ಕ್ಷೇತ್ರ : ಪಾಪನಾಶಿಯ ಅಂಗನವಾಡಿ ಕಾರ್ಯಕರ್ತೆ ಎಸ್.ಆರ್. ಅಂಗಡಿ, ಬಿ.ಎಸ್. ಬೇಲೇರಿಯ ಅಂಗನವಾಡಿ ಕಾರ್ಯಕರ್ತೆ ಸರಸ್ವತಿ ಎಮ್.ಹಿರೇಮಠ, ಮದಗುಣಕಿ ಅಂಗನವಾಡಿ ಕಾರ್ಯಕರ್ತೆ ಎಸ್.ಜಿ. ಮಾಮನಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ ಅಭಿನಂದನಾ ಪತ್ರ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದರು.