ವಿಜಯಸಾಕ್ಷಿ ಸುದ್ದಿ, ಗದಗ: ರೋಟರಿ ಗದಗ ಸೆಂಟ್ರಲ್ ವತಿಯಿಂದ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸಾರ್ವಜನಿಕ ಸೇವೆಯನ್ನು ಗುರುತಿಸಿ ತಿಪ್ಪಣ್ಣ ಹನುಮಪ್ಪ ಗಂಗಪ್ಪನವರ, ಬಸನಗೌಡ ಶರಣಪ್ಪಗೌಡ ಸಾನಬಾಳ ಇವರನ್ನು ಪ್ರಶಂಸಾ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ.ಪೂ. ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ಡಿಆರ್‌ಎಫ್ ಸಿಪಿಡಿಜಿ ರೊ. ಗಣೇಶ ಭಟ್, ಅಧ್ಯಕ್ಷ ರೊ. ಚೇತನ ಅಂಗಡಿ, ಕಾರ್ಯದರ್ಶಿ ರೊ. ರಾಜು ಉಮನಾಬಾದಿ, ಖಜಾಂಚಿ ರೊ. ಡಾ.ಪ್ರಭು ಗಂಜಿಹಾಳ, ಅಸಿಸ್ಟಂಟ್ ಗವರ್ನರ್ ರೊ. ವಿ.ಕೆ. ಗುರುಮಠ ಹಾಗೂ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು.



