ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ವೈದ್ಯರು ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ಯುವ ಮನಸ್ಸುಗಳನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದ್ದು, ಸಂಕಲ್ಪ ಕಿಡ್ನಿಕೇ ಫೌಂಡೇಶನ್ ಮತ್ತು ಲಯನ್ಸ್ ಶಾಲಾ ಮಕ್ಕಳಿಂದ ಅಂಗಾಂಗ ದಾನವನ್ನು ಪ್ರೇರೇಪಿಸುವ ಕಾರ್ಯಕ್ರಮವನ್ನು ಬುಧವಾರ ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಶಾಲಾ ಮಕ್ಕಳು ಇತರರಿಗೆ ಅಂಗಾಂಗ ದಾನ ಮಾಡಲು ಪ್ರೇರೇಪಿಸಿದ್ದಕ್ಕಾಗಿ ಅಭಿನಂದಿಸಿದರು. ಯುವ ನಾಯಕ ಕೃಷ್ಣಗೌಡ ಪಾಟೀಲ ಮಾತನಾಡಿ, ಮಕ್ಕಳು ತಮ್ಮ ಕುಟುಂಬದ ಸದಸ್ಯರನ್ನು ಅವರ ಜನ್ಮದಿನದಂದು ಅಂಗಾಂಗ ದಾನಕ್ಕಾಗಿ ನೋಂದಾಯಿಸಬೇಕೆಂದು ವಿನಂತಿಸಿದರು.
ಗದುಗಿನ ಲಾಯನ್ಸ್ ಶಾಲೆ, ತೋಂಟದಾರ್ಯ ಕನ್ನಡ ಮತ್ತು ಇಂಗ್ಲಿಷ್ ಮೀಡಿಯಂ, ಜೆಸಿ ಶಾಲೆ, ಮಹಾವೀರ ಜೈನ್ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿಗಳಾದ ಮೇಘನಾ ಲಕ್ಕುಂಡಿ, ಕೀರ್ತನಾ ಕಿಡ್ನಿ ದಾನದ ಮಹತ್ವದ ಬಗ್ಗೆ ಮಾತನಾಡಿದರು. ಗದಗ ವೈದ್ಯರ ತಂಡವು ಕಸಿ ಶಸ್ತ್ರಚಿಕಿತ್ಸಕ ಡಾ. ಅವಿನಾಶ್ ಓದುಗೌಡರ, ಯುಕೆ ಲಿವರ್ಪೂಲ್ ವಿಶ್ವವಿದ್ಯಾಲಯದ ಹಿರಿಯ ಕಸಿ ಶಸ್ತ್ರ ಚಿಕಿತ್ಸಕ ಡಾ. ಅಜಯ್ ಶರ್ಮಾ, ಕಸಿ ಶಸ್ತ್ರ ಚಿಕಿತ್ಸಕ ಡಾ. ಪವನ ಕೋಳಿವಾಡ, ಮೂತ್ರಪಿಂಡ ಶಾಸ್ತ್ರಜ್ಞ ಡಾ. ದೀಪಕ್ ಕುರಹಟ್ಟಿ ಅವರೊಂದಿಗೆ ಸಮರ್ಪಿತ ತಂಡವನ್ನು ಹೊಂದಿದೆ. ತಂಡವು ಡಾ. ಎಸ್.ಆರ್. ನಾಗನೂರ ಮತ್ತು ಡಾ. ಪ್ಯಾರಾಅಲಿ ನೂರಾನಿ ಅವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹುಲಕೋಟಿಯ ಆರ್.ಆರ್. ಓದುಗೌಡರ ಅವರು ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ.



