ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಹೆಚ್ಚಿಸಿಕೊಂಡು ಜ್ಞಾನವನ್ನು ಬೆಳೆಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಅರಿವು ಕೇಂದ್ರವು ವಿದ್ಯಾರ್ಥಿಗಳ ಪ್ರತಿಭೆಗಳನ್ನು ಅನಾವರಣಗೊಳಿಸುವ ಉತ್ತಮ ವೇದಿಕೆಯಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಲಕ್ಷ್ಮೇಶ್ವರ ತಾಲೂಕಿನ ಹದರಗಟ್ಟಿ ಗ್ರಾಮದಲ್ಲಿ ಗ್ರಂಥಾಲಯದ ಡಿಜಿಟಲ್ ರೂಪದ ಅರಿವು ಉಪ ಕೇಂದ್ರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಅರಿವು ಕೇಂದ್ರಗಳು ವಿದ್ಯಾರ್ಥಿಗಳಿಗೆ ಜ್ಞಾನದ ಭಂಡಾರ, ಕಲಿಕೆಯ ಕೇಂದ್ರ ಮತ್ತು ಭವಿಷ್ಯ ರೂಪಿಸುವ ಸ್ಥಳವಾಗಿವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಧ್ಯಯನ ಸಾಮಗ್ರಿ, ಡಿಜಿಟಲ್ ಸಂಪನ್ಮೂಲಗಳು ಮತ್ತು ತರಬೇತಿ ಒದಗಿಸುವ ಮೂಲಕ ಅವರ ಕಲಿಕೆಗೆ ಪೂರಕವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಪಿಡಿಓ ಸವಿತಾ ಸೋಮಣ್ಣವರ, ಗ್ರಾ.ಪಂ ಅಧ್ಯಕ್ಷೆ ಪ್ರೇಮಾ ಮಾನಪ್ಪ ನಾಯಕ, ಠಾಕರಪ್ಪ ಮಾಳಗಿಮನಿ, ನಿಂಗಪ್ಪ ಪ್ಯಾಟಿ, ಸೋಮಪ್ಪ ನಾಯಕ, ಧರ್ಮಪ್ಪ ಲಮಾಣಿ, ದೇವಪ್ಪ ಲಮಾಣಿ, ಪಾಂಡಪ್ಪ ರಜಪೂತ, ರಮೇಶ್ ಲಮಾಣಿ, ಶಂಕರ ಕಾರಭಾರಿ, ಪರಮೇಶ ಲಮಾಣಿ, ಮಾನಪ್ಪ ನಾಯಕ, ಸುಭಾಷ ಗುಡಿಮನಿ, ದೇವಪ್ಪ ಲಮಾಣಿ, ದೇವಪ್ಪ ಇಟಗಿ, ಅಕ್ಷಿರಾವ ಇಟಗಿ, ಲಕ್ಷ್ಮಣ ಪೂಜಾರ, ಗೋವಿಂದ ತಳವಾರ, ಸುರೇಶ ಮಾಳಗಿಮನಿ, ರವಿ ಮಾಲಗಿಮನಿ, ಬಸವರಾಜ ಲಮಾಣಿ, ಹನುಮಂತಪ್ಪ ಲಮಾಣಿ, ನಜೀರ ತಾಡಪತ್ರಿ, ರೋಹನ ಲಮಾಣಿ, ಅವಿನಾಶ ಲಮಾಣಿ, ಲಕ್ಷ್ಮಣ ಕಾರಭಾರಿ, ಗ್ರಾ.ಪಂ ಸದಸ್ಯರು, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



