ವಿದ್ಯಾವಂತರೇ ಸೈಬರ್ ಕ್ರೈಂನಲ್ಲಿ ಸಿಲುಕುತ್ತಿದ್ದಾರೆ : ಮಹಾಂತೇಶ ಸಜ್ಜನ

0
Awareness Program on ``Cyber ​​Crime and Narcotics Crime''
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಗದಗ ಜಿಲ್ಲೆಯಲ್ಲೂ ಸೈಬರ್ ಅಪರಾಧಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಅದರಲ್ಲೂ ವಿದ್ಯಾವಂತ ಜನರೇ ಇದರಲ್ಲಿ ಹೆಚ್ಚಾಗಿ ಮೋಸ ಹೋಗುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಹಣ ಕಳೆದುಕೊಂಡು ಒದ್ದಾಡುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಪ್ರತಿಯೊಬ್ಬರಲ್ಲೂ ಡಿಜಿಟಲ್ ಕ್ರೈಂಗಳ ಜಾಗೃತಿ ಅಗತ್ಯವಾಗಿದೆ ಎಂದು ಗದಗ ಸಿಇಎನ್ ಪೊಲೀಸ್ ಠಾಣೆಯ ಡಿವೈಎಸ್‌ಪಿ ಮಹಾಂತೇಶ ಸಜ್ಜನ ಹೇಳಿದರು.

Advertisement

ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಸೈಬರ್ ಆರ್ಥಿಕ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸ್ ಠಾಣೆ (ಸಿಇಎನ್) ಗದಗ ಇವರ ವತಿಯಿಂದ ಪದವಿ ಹಂತದ ವಿದ್ಯಾರ್ಥಿಗಳಿಗಾಗಿ ನಡೆದ `ಸೈಬರ್ ಕ್ರೈಂ ಮತ್ತು ಮಾದಕ ವಸ್ತುಗಳ ಅಪರಾಧ’ಗಳ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ದುಡಿಯದೆ ಅತಿ ಹೆಚ್ಚು ಹಣ ಗಳಿಸುವ, ಆಫರ್‌ನಲ್ಲಿ ಅತಿ ಹೆಚ್ಚಿನ ಲಾಭ ಪಡೆಯುವ ದುರಾಸೆಗೆ ಸಿಲುಕಿರುವ ಜನರೇ ಹೆಚ್ಚಿನ ಪ್ರಮಾಣದಲ್ಲಿ ಸೈಬರ್ ವಂಚನೆ ಜಾಲದಲ್ಲಿ ಸಿಲುಕುತ್ತಿದ್ದಾರೆ. ಪದವಿ ಹಂತದ ವಿದ್ಯಾರ್ಥಿಗಳು ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ವ್ಯಕ್ತಿಗಳ ಜೊತೆಯಲ್ಲಿ ಗೆಳೆತನ ಮಾಡಿ ವೈಯಕ್ತಿಕ ಹಾಗೂ ಆರ್ಥಿಕ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ತೊಂದರೆಗೆ ಸಿಲುಕುತ್ತಿದ್ದಾರೆ ಎಂದರು.

ಶಾಪಿಂಗ್ ಮಾಲ್ ಹಾಗೂ ಎಲ್ಲೆಂದರಲ್ಲಿ ಅಪರಿಚತರಿಗೆ ಫೋನ್ ನಂಬರ್, ಇಮೇಲ್ ಐಡಿ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ, ಎಟಿಎಂ ಪಿನ್, ಇಂಟರ್‌ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್ಗಳ ಬಗ್ಗೆ ಮಾಹಿತಿ ನೀಡಬಾರದು.

ವೈಯಕ್ತಿಕ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಫೋನ್ ಮಾಡುವ ವ್ಯಕ್ತಿಗಳ ಜೊತೆಗೆ ಯಾವತ್ತೂ ವಯಕ್ತಿಕ ವಿವರ ಹಂಚಿಕೊಳ್ಳಬಾರದು ಎಂದು ಸಲಹೆ ನೀಡಿದರು.

ಡಿವೈಎಸ್‌ಪಿ ಮಹಾಂತೇಶ ಸಜ್ಜನ ಹಾಗೂ ಸಿಬ್ಬಂದಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಸಿಇಎನ್ ವಿಭಾಗದ ಶಿವಕುಮಾರ ಹರ್ಲಾಪುರ, ಕಿರಣ, ಹಿರಿಯ ಪ್ರಾಧ್ಯಾಪಕ ಎಸ್.ಎಸ್. ಸೂಡಿ, ಜ್ಯೋತಿ ಬೋಳಣ್ಣವರ, ನಸರೀನ್‌ಬಾನು ಜಮಾದರ, ಅಂಜನಮೂರ್ತಿ, ಅನಿಲಕುಮಾರ, ಸುನಂದಾ ಮುಂಜಿ, ವಿ.ಸಿ. ಇಲ್ಲೂರ, ಜಯಶ್ರೀ ಮುತಗಾರ, ನಾಗರಾಜ ಹೊನ್ನೂರ, ಬಸವರಾಜ ಕಂಬಳಿ, ಚಂದ್ರು ಸಂಶಿ, ಬಸವರಾಜ ಪಲ್ಲೇದ, ವಿ.ಕೆ. ಸಂಗನಾಳ, ಬಸವರಾಜ ಮಡಿವಾಳರ, ಕಿರಣ ರಂಜಣಗಿ, ಎಂ.ಎಫ್. ತಹಸೀಲ್ದಾರ, ಶಂಕರ ನರಗುಂದ, ಶಶಿಕಲಾ ಕಿನ್ನಾಳ, ಪ್ರೇಮಾ ಕಾತ್ರಾಳ, ಶ್ವೇತಾ ಹುಣಸಿಮರದ, ಸಿದ್ದು ನವಲಗುಂದ ಇದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಎಸ್.ಎಲ್. ಗುಳೆದಗುಡ್ಡ, ದಿನದಿಂದ ದಿನಕ್ಕೆ ಸೈಬರ್ ಅಪರಾಧ ಜಾಲ ವಿಸ್ತಾರವಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಜಾಗೃತರಾಗಬೇಕು. ವಂಚನೆಗೆ ಒಳಗಾಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ. ಈ ನಿಟ್ಟಿನಲ್ಲಿ ಇಲಾಖೆ ಕಾಲೇಜಿಗೆ ಬಂದು ಅರಿವು ಮೂಡಿಸುತ್ತಿರುವುದು ಸ್ವಾಗತಾರ್ಹ ಎಂದರು.


Spread the love

LEAVE A REPLY

Please enter your comment!
Please enter your name here