ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಸೋಮೇಶ್ವರ ತೇರಿನ ಮನೆ ಹತ್ತಿರ ಸರಕಾರದ ವಿವಿಧ ಇಲಾಖೆಗಳು ಹಾಗೂ ಸಂಘಟನೆಗಳ ನೇತೃತ್ವದಲ್ಲಿ ಸಂವಿಧಾನ ದಿನಾಚರಣೆ ಜಾಗೃತಿ ಜಾಥಾ ಯಶಸ್ವಿಯಾಗಿ ನೆರವೇರಿತು.
ತಹಸೀಲ್ದಾರ ಧನಂಜಯ ಎಂ ಅವರು ಡಾ. ಬಿ.ಆರ್. ಅಂಬೇಡ್ಕರ್ ರ ಭಾವಚಿತ್ರ ಮತ್ತು ಸಂವಿಧಾನ ಪೀಠಿಕೆಗೆ ಪೂಜೆ ಸಲ್ಲಿಸಿ ಜಾಥಾಕ್ಕೆ ಚಾಲನೆ ನೀಡಿದರು. ವಿವಿಧ ಶಾಲಾ-ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ನಮ್ಮ ಹೆಮ್ಮೆಯ ಸಂವಿಧಾನಕ್ಕೆ ಜಯವಾಗಲಿ, ವಿಶ್ವಕ್ಕೆ ಮಹತ್ವದ ಕೊಡುಗೆ ನೀಡಿದ ಭಾರತರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಜಯವಾಗಲಿ ಇತ್ಯಾದಿ ಘೋಷಣೆಗಳನ್ನು ಮೊಳಗಿಸುತ್ತಾ ಸಾಗಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ವಿ.ಪಿ ಸದಸ್ಯ ಎಸ್.ವಿ. ಸಂಕನೂರ, ಪಿಎಸ್‌ಐ ನಾಗರಾಜ್ ಗಡಾದ, ಕೃಷಿ ಅಧಿಕಾರಿ ಚಂದ್ರಶೇಖರ್ ನರಸಮ್ಮನವರ, ಸಿಡಿಪಿಓ ಮೃತ್ಯುಂಜಯ ಗುಡ್ಡದನ್ವೇರಿ, ರಾಮಪ್ಪ ಗಡದವರ, ರಮೇಶ್ ಅಡುಗೆಮನೆ, ಬಸವಣ್ಣೆಪ್ಪ ನಂದೆಣ್ಣವರ, ಫಕ್ಕೀರಪ್ಪ ಬಜಕ್ಕನವರ, ಸೋಮಣ್ಣ ಯತ್ತಿನಹಳ್ಳಿ, ಅನಿಲ ನಂದೆಣ್ಣವರ, ಅನಿಲ ಮುಳಗುಂದ, ಹನುಮಂತಪ್ಪ ನಂದೆಣ್ಣವರ, ನಾಗರಾಜ್ ಮಡಿವಾಳರ, ರಾಮಣ್ಣ ಲಮಾಣಿ (ಶಿಗ್ಲಿ), ಪ್ರಶಾಂತ್ ಖಿಮಾಯಿ, ಅಮರೀಶ್ ತೆಂಬದಮನಿ, ಗಾಳೆಪ್ಪ ಹರಿಜನ, ಮಾರ್ತಾಂಡಪ್ಪ ಗಾಳೆಪ್ಪನವರ, ಮಹಾಂತೇಶ್ ಮುಶೆಪ್ಪನವರ, ಮಂಜುಳಾ ಹೂಗಾರ್, ನೇತ್ರಾವತಿ ಹೊಸಮನಿ, ಫಕ್ಕೀರೇಶ ನಂದೆಣ್ಣವರ, ಸದಾನಂದ ನಂದೆಣ್ಣವರ, ಹೊನ್ನಪ್ಪ ಸಂಜೀವಣ್ಣವರ, ಈಶ್ವರ ಮೆಡ್ಲೇರಿ, ಉಮೇಶ್ ನೇಕಾರ, ಎನ್.ಎ. ಮುಲ್ಲಾ, ಕೆ.ಓ. ಹೂಲಿಕಟ್ಟಿ ಹಾಗೂ ಶಾಲಾ-ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.



