ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ಕಳಸಾಪೂರ ಗ್ರಾಮದ ಬಸವಕೇಂದ್ರ ಮತ್ತು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿಶ್ವವಿದ್ಯಾಯಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನದ ಪ್ರಯುಕ್ತ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
Advertisement
ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಬಸವಕೇಂದ್ರದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಖಂಡಮ್ಮನವರ, ಬೀಡಿ, ಸಿಗರೇಟ, ಗುಟಕಾ, ಮಾದಕ ವಸ್ತುಗಳ ವಿರುದ್ಧದ ಹೋರಾಟ ಒಂದು ಚಳುವಳಿಯಾಗಬೇಕು. ಮಾದಕ ವಸ್ತುಗಳ ಮಾಯಜಾಲವನ್ನು ಅಡಗಿಸಿ, ಆರೋಗ್ಯಕರ ಬದುಕಿನತ್ತ ಮುನ್ನೆಡೆಯೋಣ ಎಂದರು.
ಜಾಥಾ ಕಾರ್ಯಕ್ರಮದಲ್ಲಿ ಸುರೇಶ ಲಮಾಣಿ, ಡಾ. ದಣಿಕುಮಾರ, ಕೃಷ್ಣಾ ದುರಗಪ್ಪನವರ, ಪಿಡಿಓ ಮಹೇಶ, ಗ್ರಾಮದ ಗುರುಹಿರಿಯರು, ಯುವಕರು ಪಾಲ್ಗೊಂಡಿದ್ದರು. ಜಾಥಾದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ದುಶ್ಚಟ, ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಘೋಷಣೆಗಳನ್ನು ಕೂಗಿದರು.