ಬೆಂಗಳೂರು;- ಸೋಮವಾರ ಆಯುಧ ಪೂಜೆ ಹಿನ್ನಲೆ, ಸರ್ಕಾರಿ ಬಸ್ ಗಳ ಪೂಜೆಗೆ ಹೆಚ್ಚುವರಿ ಹಣ ಬಿಡುಗಡೆಗೆ ಡಿಮ್ಯಾಂಡ್ ಮಾಡಲಾಗಿದೆ. ಬೆಲೆ ಏರಿಕೆ ಹಿನ್ನೆಲೆ ನೌಕರರಿಂದ ಹೆಚ್ಚುವರಿ ಹಣಕ್ಕೆ ಒತ್ತಾಯ ಮಾಡಲಾಗಿದ್ದು, ಪ್ರತಿ ವರ್ಷ ಆಯುಧ ಪೂಜೆಗೆ ಜೀಪ್, ಕಾರ್ ಗೆ 40 ರೂ, ಬಸ್ ಗಳಿಗೆ ತಲಾ 100 ರೂ. ಗಳನ್ನು ನಿಗಮಗಳು ಬಿಡುಗಡೆ ಮಾಡುತ್ತಿದ್ದವು. ಆದ್ರೆ ಈ ಬಾರಿ ಪ್ರತಿ ಬಸ್ ಗೆ 500 ರೂ. ಬಿಡುಗಡೆ ಮಾಡುವಂತೆ ಒತ್ತಾಯ ಕೇಳಿ ಬಂದಿದೆ.
ಆಯುಧ ಪೂಜೆ ಸಂಭ್ರಮದಿಂದ ಆಚರಿಸಲು ಸಾರಿಗೆ ನಿಗಮದ ನೌಕರರ ತೀರ್ಮಾನ ಮಾಡಿದ್ದು, ಒಂದು ಬಸ್ ಗೆ ಸರಳವಾಗಿ ಪೂಜೆ ಮಾಡಲು ಬಾಳೆಕಂದು ತೆಂಗಿನಕಾಯಿ,ಕರ್ಪೂರ ,ಕುಂಕುಮ, ಬೂದು ಕುಂಬಳಕಾಯಿ ವಿಭೂತಿ ಅಗತ್ಯ ಇದೆ. ಪ್ರತಿಬಾರಿ ಜಿಪುಣತನ ತೋರುತ್ತಿದ್ದ ಬಿಎಂಟಿಸಿ ಹಾಗೂ ಕೆಎಸ್ಆರ್ ಟಿಸಿ, ಹೀಗಾಗಿ ಈ ಬಾರಿ ಆಯುಧ ಪೂಜೆ ಸಂಭ್ರಮಕ್ಕೆ ಹೆಚ್ಚುವರಿ ಹಣ ನೀಡುವಂತೆ ನೌಕರರು ಪಟ್ಟು ಹಿಡಿದಿದ್ದಾರೆ.



