ವಿಜಯಸಾಕ್ಷಿ ಸುದ್ದಿ, ಗದಗ : ಧನ್ವಂತರಿ ಜಯಂತಿ ಅಂಗವಾಗಿ ಕೊಪ್ಪರ್ ಆಕಾಡೆಮಿಯಲ್ಲಿ ವಿಶ್ವ ಆಯುರ್ವೇದ ದಿನ ಆಚರಿಸಲಾಯಿತು. ಆಯುರ್ವೇದದ ದೇವರು ಎಂದು ಪೂಜಿಸಲ್ಪಡುವ ಧನ್ವಂತರಿಯನ್ನು ಗೌರವಿಸಿ, ನಮಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಘು ಕೊಪ್ಪರ್, ಎಂತಹ ರೋಗಗಳನ್ನೂ ನಾಶಪಡಿಸುವಂತ ಶಕ್ತಿ, ಸಾಮರ್ಥ್ಯವನ್ನು ಆಯುರ್ವೇದ ಹೊಂದಿದೆ. ನಮ್ಮ ತಂದೆ ರವೀಂದ್ರ ಕೊಪ್ಪರ್ ಅವರು ಸಾವಿರಾರು ಜನರ ಕಾಮಾಲೆ ರೋಗವನ್ನು ಆಯುರ್ವೇದ ಔಷಧಿಯಿಂದಲೇ ಗುಣಪಡಿಸಿದ್ದಾರೆ. ನಮಗೆ ಹಲವು ರೋಗಗಳನ್ನು ಗುಣಪಡಿಸುವ ಔಷಧಿಗಳ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ. ಅವರ ಮಾರ್ಗದರ್ಶನದಂತೆ ಬಡವರಿಗೆ, ಮಠದ ವಿದ್ಯಾರ್ಥಿಗಳಿಗೆ ಉಚಿತವಾಗಿ ಆಯುರ್ವೇದ ಔಷಧ ಇಂದಿಗೂ ಕೊಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಸುನೀಲಕುಮಾರ ಹಲಕುರ್ಕಿ, ಪ್ರವೀಣಕುಮಾರ್ ಹುರಳಿ, ರಮೇಶ ಬಮ್ಮನಗೌಡ್ರು, ದಯಾನಂದ ತಡಸ, ಕೊಪ್ಪರ್ ಅಕಾಡೆಮಿಯ ಅಧ್ಯಕ್ಷ ಶ್ರೀಕಾಂತ್ ಕೊಪ್ಪರ್, ವಿಹಾನ ಕೊಪ್ಪರ್ ಉಪಸ್ಥಿತರಿದ್ದರು.