ವಿಜಯಸಾಕ್ಷಿ ಸುದ್ದಿ, ಗದಗ: ಮನುಷ್ಯನ ಆರೋಗ್ಯ ಸುಧಾರಣೆಯಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿಯು ಯಾವುದೇ ಅಡ್ಡಪರಿಣಾಮವಿಲ್ಲದೆ ರಾಮಬಾಣದಂತೆ ಫಲಿತಾಂಶ ನೀಡಬಲ್ಲದು ಎಂದು ಡಾ. ಪ್ರವೀಣ ಹೇಳಿದರು.
ಅವರು ಗದುಗಿನ ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನ ಏರ್ಪಡಿಸಿದ್ದ ಬಿ.ಜಿ. ಅಣ್ಣಿಗೇರಿ ಗುರುಗಳ ೬೨ನೇ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಚಿಂತನ ಮಾಲಿಕೆಯಲ್ಲಿ ‘ಆಯುರ್ವೇದ ಮನೆ ಮದ್ದು’ ವಿಷಯವಾಗಿ ಉಪನ್ಯಾಸ ನೀಡಿದರು.
ಭಾರತೀಯ ವೈದ್ಯ ಪರಂಪರೆಯಲ್ಲಿ ಆಯುರ್ವೇದ ಪದ್ಧತಿಯು ಅತ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದೆ. ರೋಗವನ್ನು ನಿಧಾನಗೊಳಿಸುವ ಅದ್ಭುತ ಶಕ್ತಿ ಆಯುರ್ವೆದಕ್ಕೆ ಇದೆ. ಈ ಹಿಂದೆ ಋಷಿಮುನಿಗಳು, ಸಾಧು-ಸಂತರು ಆಯುರ್ವೇದ ಪದ್ಧತಿಯನ್ನು ಅನುಸರಿಸುವ ಮೂಲಕ ಶತಾಯುಷಿಗಳಾಗಿ ಬಾಳಿದ್ದಾರೆ ಎಂದರು.
ಇAದಿನ ಆಹಾರ ಪದ್ಧತಿ, ಬದಲಾದ ಜೀವನ ಶೈಲಿ, ಅವಸರದ ಜೀವನದಿಂದಾಗಿ ಮನುಷ್ಯನ ಆರೋಗ್ಯದ ಮೇಲೆ ಹಲವಾರು ಪರಿಣಾಮ ಬೀರುತ್ತಿವೆ. ಕಾರಣ ನಾವಿಂದು ಪರಿಶ್ರಮದ ಬದುಕು, ಸಾತ್ವಿಕ ಆಹಾರ ಪದ್ಧತಿ, ಸರಳ ಮತ್ತು ಸಹಜ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ, ಆಶ್ರಮದಲ್ಲಿ ಪ್ರತಿ ತಿಂಗಳು ನಡೆಸಿಕೊಂಡು ಬಂದಿರುವ ಆಧ್ಯಾತ್ಮಿಕ-ಶೈಕ್ಷಣಿಕ ಚಿಂತನ ಮಾಲಿಕೆ ಉತ್ತಮ ಫಲಿತಾಂಶ ನೀಡುತ್ತಿದ್ದು, ಆಶ್ರಮದ ವಿದ್ಯಾರ್ಥಿಗಳ ಜ್ಞಾನದ ದಿಗಂತವನ್ನು ಹೆಚ್ಚಿಸುವಲ್ಲಿ ಬಹಳಷ್ಟು ಉಪಯುಕ್ತವಾಗಿದೆ ಬರಲಿರುವ ದಿನಗಳಲ್ಲಿ ಈ ಮಾಲಿಕೆಯನ್ನು ಇನ್ನಷ್ಟು ಪರಿಣಾಮಕಾರಿ ಕಾರ್ಯಕ್ರಮವನ್ನಾಗಿ ಪರಿವರ್ತಿಸಲಾಗುವದು ಎಂದರು.
ವೇದಿಕೆಯ ಮೇಲೆ ಪ್ರತಿಷ್ಠಾನದ ಉಪಾಧ್ಯಕ್ಷ ಶಂಕ್ರಪ್ಪ ಅಣ್ಣಿಗೇರಿ, ಸದಸ್ಯರಾದ ಡಾ. ಚನ್ನಪ್ಪ ಗೌಡರ್ ಮತ್ತು ಡಾ. ಬಸಯ್ಯ ಬೆಳ್ಳೆರಿಮಠ ಉಪಸ್ಥಿತರಿದ್ದರು.
ಶಿಕ್ಷಕಿ ಮಂಜುಳಾ, ಹುಲಿಗೆಮ್ಮ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರತಿಭಾ ಪ್ರತಿಷ್ಠಾನದ ಕಾರ್ಯದರ್ಶಿ ಬೆಟ್ಟದೂರ ವಿದ್ಯಾರ್ಥಿಗಳಿಗೆ ನೀತಿ ಪಾಠ ಹೇಳಿದರು, ಕೊನೆಗೆ ಶಿಕ್ಷಕಿ ಮಂಜುಳಾ ವಂದಿಸಿದರು.