ವಿಜಯಸಾಕ್ಷಿ ಸುದ್ದಿ, ಗದಗ : ‘ಶ್ರೀ ಧನ್ವಯಂತಿ ಜಯಂತಿ’ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಪ್ರಯುಕ್ತ ಸೋಮವಾರ ಆಯುರ್ವೇದ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ ಮತ್ತು ಡಿವೈಎಸ್‌ಪಿ ಇನಾಮದಾರ ಅವರು ಜಾಥಾಕ್ಕೆ ಚಾಲನೆ ನೀಡಿದರು.
Advertisement
ಈ ಸಂದರ್ಭದಲ್ಲಿ ಆಯುಷ್ ಇಲಾಖೆಯ ಅಧಿಕಾರಿ ಡಾ. ಮಲ್ಲಿಕಾರ್ಜುನ ಉಪ್ಪಿನ, ಡಿಜಿಎಂ ಆಯುರ್ವೇದಿಕ ಕಾಲೇಜಿನ ಪ್ರಿನಿಪಾಲ ಡಾ. ಸಂತೋಷ ಬೆಳವಡಿ, ಡಾ. ವೀರೇಶ ಕೊಟ್ರಶೆಟ್ಟರ್, ವೈದ್ಯಾಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು ಇದ್ದರು. ಆಯುರ್ವೇದ ಜಾಥಾವು ನಗರದ ಮುನ್ಸಿಪಲ್ ಕಾಲೇಜಿನಿಂದ ರೋಟರಿ ಸರ್ಕಲ್, ಟಾಂಗಾ ಕೂಟ, ಮಹೇಂದ್ರಕರ ಸರ್ಕಲ್, ಗಾಂಧಿ ಸರ್ಕಲ್‌ನಿಂದ ಮುನ್ಸಿಪಲ್ ಕಾಲೇಜಿಗೆ ಬಂದು ತಲುಪಿತು .