ದೂರು ಹಿಂಪಡೆಯದ ಕೆಆರ್‌ಎಸ್ ಪಾರ್ಟಿ ಅಧ್ಯಕ್ಷನ ಮೇಲೆ ಆಯುಷ್ ಇಲಾಖೆಯ ಅಧಿಕಾರಿ, ಬೆಂಬಲಿಗರಿಂದ ಹಲ್ಲೆ, ಕೊಲೆ ಬೆದರಿಕೆ ಆರೋಪ

0
Spread the love

ಗದಗ: ಆಯುಷ್ ಇಲಾಖೆಯ ಸಹಾಯಕ ಆಡಳಿತ ಅಧಿಕಾರಿಯ ವಿರುದ್ಧ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು ಎನ್ನಲಾದ ವಿಷಯಕ್ಕೆ ಸಂಬಂಧಿಸಿದಂತೆ
ಕೆಆರ್‌ಎಸ್ ಪಾರ್ಟಿ ಅಧ್ಯಕ್ಷನ ಮೇಲೆ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಲಾಗಿದೆ ಎಂದು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಕೆಅರ್‌ಎಸ್ ಪಾರ್ಟಿ ಅಧ್ಯಕ್ಷ ನೀಲಪ್ಪ ತಂದೆ ಹನಮಂತಪ್ಪ ಕಟಗಿ (31) ಎಂಬುವರು, ಆಯುಷ್ ಇಲಾಖೆಯ ಸಹಾಯಕ ಆಡಳಿತ ಅಧಿಕಾರಿ ಶ್ರೀಮತಿ ಸುಧಾ.ಎ.ಜಾಲಿಹಾಳ ಎಂಬುವರ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು ಎನ್ನಲಾಗಿದೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ದೂರು ಹಿಂಪಡೆಯಲು ಶ್ರೀಮತಿ ಸುಧಾ ಎ. ಜಾಲಿಹಾಳ, ಚಂದ್ರು ಬಮ್ಮನಾಳ, ಡಾ:ಎಮ್.ಎಸ್.ಉಪ್ಪಿನ ಒತ್ತಡ ಹೇರಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

ದೂರು ಹಿಂಪಡೆಯದೇ ಇದ್ದಾಗ 29/11/2023 ರ ರಾತ್ರಿ 11:30ರ ಸುಮಾರಿಗೆ, ಡಾ: ಎಮ್.ಎಸ್ ಉಪ್ಪಿನ, ರಾಜೇಸಾಬ ಕಾಗದಗಾರ, ಆನಂದ ಹಂಡಿ, ಆದಿ ಪಾಟೀಲ, ಅಮ್ಮಿನಬಾಹಿ ಸೇರಿದಂತೆ ಹೆಸರು, ವಿಳಾಸ ತಿಳಿಯದ ಇನ್ನೂ 5-6ಜನ ಆರೋಪಿತರು, ಫಿರ್ಯಾದಿ ನೀಲಪ್ಪನಿಗೆ ಹಲ್ಲೆ ಮಾಡುವ ಉದ್ದೇಶದಿಂದ ಆದರ್ಶ ನಗರದಲ್ಲಿರುವ ಮನೆಯ ಹತ್ತಿರ ಬಂದು, ಹೊರಗೆ ಕರೆದುಕೊಂಡು ಹೋಗಿ ಆರೋಪಿತರು ಕೈಕಡಗ, ಬ್ರಾಸ್ಲೇಟ್ ಇನ್ನಿತರ ವಸ್ತುಗಳಿಂದ ನೀಲಪ್ಪನ ತಲೆಗೆ, ಹೊಟ್ಟೆಗೆ, ಮರ್ಮಾಂಗಕ್ಕೆ, ಬೆನ್ನಿಗೆ, ಪಕ್ಕಡಿಗೆ ಹೊಡೆದು ಅವಾಚ್ಯವಾಗಿ ಬೈದು, ಜಾತಿ ನಿಂದನೆ ಮಾಡಿ, ದೂರು ಹಿಂಪಡೆಯದೇ ಹೋದಲ್ಲಿ ಕೊಲೆ ಮಾಡುತ್ತೇವೆ ಅಂತ ಜೀವದ ಬೆದರಿಕೆ ಹಾಕಿದ್ದಾರೆ.

ಈ ಬಗ್ಗೆ ಕೆಆರ್‌ಎಸ್ ಪಾರ್ಟಿ ಅಧ್ಯಕ್ಷ ನೀಲಪ್ಪ ತಂದೆ ಹನಮಂತಪ್ಪ ಕಟಗಿ ಗದಗ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಕುರಿತು 0163/2023,, IPC 1860(U/s-143,147,148,323,324,109,504,506,149):the SC&ST (prevention of atrocities) amendment Act 2015(U/s-3(1)(r)(s)(2)(va)) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here