ವಿಜಯಸಾಕ್ಷಿ ಸುದ್ದಿ, ಗದಗ : ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುವುದರ ಜೊತೆಗೆ ಇತರ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಅವರೂ ಶಿಕ್ಷಣದಲ್ಲಿ ಮೇಲುಗೈ ಸಾಧಿಸುವಂತೆ ಪಾಲಕರು, ಶಿಕ್ಷಕರು ಉತ್ತೇಜನ ನೀಡಬೇಕೆಂದರು ಗದಗ ಐಎಂಎ ಮಾಜಿ ಅಧ್ಯಕ್ಷ ಡಾ.ಪ್ಯಾರಅಲಿ ನೂರಾನಿ ಅಭಿಪ್ರಾಯಪಟ್ಟರು.
ಅವರು ಶನಿವಾರ ಗದಗ ತಾಲೂಕಿನ ಹೊಂಬಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪ್ರೇಮಿ, ತ್ಯಾಗಜೀವಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನವು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಕಲಿಕೆಯಲ್ಲಿ ಎಲ್ಲ ಮಕ್ಕಳನ್ನೂ ಮುಂಚೂಣಿಗೆ ತರಬೇಕು. ಪ್ರತಿಭಾವಂತರನ್ನು ಪುರಸ್ಕರಿಸುವ ಇತರ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಅವರೂ ಮುಂದೆ ಬರುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಪ್ರತಿಷ್ಠಾನವು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲೆಂದೇ ಶಾಲೆಯ ಬಾಗಿಲವರೆಗೂ ಬಂದು ಸನ್ಮಾನಿಸಿ ನೀವೂ ಇವರಂತೆ ಆಗಿ ಎಂದು ತೋರಿಸುವ ಕಾರ್ಯ ಮಾಡುತ್ತಿದ್ದಾರೆ ನೀಜಕ್ಕೂ ಪ್ರತಿಷ್ಠಾನ ದಿಟ್ಟ ಹೆಜ್ಜೆಯನ್ನಿಟ್ಟಿದೆ ಎಂದರು.
ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ವಹಿಸಿದ್ದರು. ಉಪಾಧ್ಯಕ್ಷ ಶಂಕ್ರಪ್ಪ ಅಣ್ಣಿಗೇರಿ, ಶಾಲೆಯ ಮುಖ್ಯೋಪಾಧ್ಯಾಯ ಎಂ.ವ್ಹಿ. ಪಾಟೀಲ, ಶರಣಪ್ಪ ದಿಡ್ಡಿಮನಿ, ಕೆ.ವ್ಹಿ. ಹಿರೇಮಠ, ಸಿ.ಬಿ. ಮುಧೋಳಮಠ ಉಪಸ್ಥಿತರಿದ್ದರು.
ಹೊಂಬಳ ಗ್ರಾಮದ ಸರಕಾರಿ ಪ್ರೌಢಶಾಲೆಯ ಮುಸ್ಕಾನ್ ಅಬ್ಬಿಗೇರಿ, ಜ್ಯೋತಿ ಸರ್ವದೆ, ರೇಖಾ ನರೇಗಲ್, ಸಹನಾಬೇಗಂ ದಂಡಿನ, ಮಹಾಲಕ್ಷ್ಮಿ ಪಾಟೀಲ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶಾಲೆಯ ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಲಿಂಗದಾಳ: ತಾಲೂಕಿನ ಲಿಂಗದಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಉಮೇಶ ಗುಳೇದ, ಗ್ರಾಮದ ಗಣ್ಯರಾದ ಗುರುಸಿದ್ಧಪ್ಪ ಅಂಗಡಿ, ಶಾಲಾ ಮುಖ್ಯೋಪಾಧ್ಯಾಯೆ ಪಾರಮ್ಮ ಸಜ್ಜನ ಅವರ ಉಪಸ್ಥಿತಿಯಲ್ಲಿ ಪ್ರತಿಷ್ಠಾನದ ಪದಾಧಿಕಾರಿಗಳು, ಸೌಜನ್ಯ ಸಿದ್ಧಣ್ಣವರ, ಕೀರ್ತಿ ಲಿಂಗನಗೌಡ್ರ, ದೇವರಾಜ ಗೋನಾಳ, ಸುಕನ್ಯಾ ತೊರಗಲ್ಲ, ಸ್ಪಂದನಾ ನವಲಗುಂದ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಆರ್.ಎಂ. ಬಿಂಗಿ ಸ್ವಾಗತಿಸಿದರು, ಎಸ್.ಬಿ. ಭಜಂತ್ರಿ ನಿರೂಪಿಸಿ ವಂದಿಸಿದರು.
ಕದಡಿ : ಗದಗ ತಾಲೂಕಿನ ಕದಡಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯೆ ಸುಧಾ ಬನಿಕಲ್, ಗಣ್ಯರಾದ ಮಂಜುನಾಥ ಸಾಲಿ, ಬಾಳಪ್ಪ ಹುನಗುಂಡಿ ಹಾಗೂ ಪ್ರತಿಷ್ಠಾನದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಬಸಮ್ಮ ಹಿರೇಗೌಡ್ರ, ತಸ್ಲೀಮಾ ರಾಜೇಖಾನ್, ಅಕ್ಷತಾ ಕಬ್ಬಲಗೇರಿ, ಸೀಮಾ ಸವಡಿ, ಅಕ್ಕಮ್ಮ ವೀರಕ್ತಮಠ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಸ್.ವ್ಹಿ. ಗಂಗಪ್ಪನವರ ನಿರೂಪಿಸಿದರು. ಡಿ.ಪಿ. ರಂಗವಾಲೆ ವಂದಿಸಿದರು. ಮಂಜುಳಾ, ನೇಹಾ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದರು.
ಜು. 23ರಂದು ಸಂಜೆ 4 ಗಂಟೆಗೆ ಗದುಗಿನ ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಲಿಂ. ಬಿ.ಜಿ. ಅಣ್ಣಿಗೇರಿ ಗುರುಗಳ 94ನೇ ಜಯಂತಿ ಹಾಗೂ 10ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭ ಜರುಗಲಿದೆ. ಸಾನ್ನಿಧ್ಯವನ್ನು ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಪೂಜ್ಯ ಜ.ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ ವಹಿಸುವರು.
ಮುಖ್ಯ ಅತಿಥಿಗಳಾಗಿ ಡಿಡಿಪಿಐ ಎಂ.ಎ. ರಡ್ಡೇರ, ವೈದ್ಯರಾದ ಡಾ. ಸಿ.ಸೊಲೋಮನ್, ನಿವೃತ್ತ ಪ್ರಾಚಾರ್ಯ ಸಿದ್ದು ಯಾಪಲಪರವಿ ಆಗಮಿಸುವರು. ಬೆಟಗೇರಿ ಗಾಂಧಿ ನಗರದ, ಗದಗ ಸಿದ್ದಲಿಂಗ ನಗರದ, ರಾಜೀವ ಗಾಂಧಿ ನಗರದ, ಎಸ್.ಎಂ. ಕೃಷ್ಣಾ ನಗರದ ಸರಕಾರಿ ಪ್ರೌಢಶಾಲೆ ಹಾಗೂ ಗದುಗಿನ ಸರಕಾರಿ ಉರ್ದು ಪ್ರೌಢಶಾಲೆಯ ಪ್ರತಿಭಾನ್ವಿತರಿಗೆ ಪುರಸ್ಕಾರ ನೀಡಲಾಗುವದು.
Advertisement