ಬೆಳಗಾವಿ: ರಸ್ತೆ ನಿರ್ಮಿಸದ ಹಿನ್ನೆಲೆ ಕಾಲೋನಿ ನಿವಾಸಿಗಳಿಂದ ವಿನೂತನ ಪ್ರತಿಭಟನೆ ಮಾಡಲಾಗಿದೆ. ಬೆಳಗಾವಿಯ ನಿವಾಸಿಗಳಿಂದ ಹಾಳಾದ ರಸ್ತೆಗೆ ಹೂ ಹಾಕಿ ಕುಂಬಳಕಾಯಿ ಒಡೆದು, ರಸ್ತೆ ಮೇಲೆ ಹ್ಯಾಫಿ ಬರ್ತಡೆ ಅಂತಾ ಬರೆದು ಕೇಕ್ ಕಟ್ ಮಾಡಿ ಬೊಬ್ಬೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಸಾಕಷ್ಟು ವರ್ಷಗಳಿಂದ ರಸ್ತೆ ಮಾಡುವಂತೆ ಮನವಿ ಮಾಡಿದ್ರೂ ಸ್ಪಂದಿಸದ ಹಿನ್ನೆಲೆ ಇಂದು ರಸ್ತೆಯ ಹುಟ್ಟು ಹಬ್ಬ ಅಂತಾ ಕೇಕ್ ಕಟ್ ಮಾಡಿ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ಮಾಡಿ ಅಂತಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.