ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸರಕಾರಿ ಶಾಲೆಗಳಲ್ಲಿ ಸಾಕಷ್ಟು ಬಡ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ಅವರೂ ಎಲ್ಲ ಮಕ್ಕಳಂತೆ ಕಲಿಯುವ ಹಂಬಲ ಹೊಂದಿದ್ದು, ಅವರಿಗೆ ಇರುವ ಅಗತ್ಯತೆಗಳನ್ನು ಸಮಾಜದಲ್ಲಿ ದಾನಿಗಳು ಸೇವಾ ಮನೋಭಾವನೆಯಿಂದ ನೀಡುತ್ತಿದ್ದಾರೆ. ಶಿಕ್ಷಣದಲ್ಲಿ ದಾನಿಗಳ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಚ್. ನಾಯಕ್ ಹೇಳಿದರು.
ಅವರು ಶನಿವಾರ ಪಟ್ಟಣದ ಸ.ಹಿ.ಪ್ರಾ.ಶಾಲೆ.ನಂ.2ರಲ್ಲಿ 260 ಮಕ್ಕಳಿಗೆ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ ಬೆಂಗಳೂರು ಇವರಿಂದ ಕೊಡಮಾಡಿದ ಒಟ್ಟು 1,51,000 ರೂಪಾಯಿಗಳ ಮೌಲ್ಯದ ಬ್ಯಾಗ್ ಹಾಗೂ ಕಲಿಕಾ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಮಕ್ಕಳ ಗುಣಮಟ್ಟದ ಕಲಿಕೆಗಾಗಿ ಸಮುದಾಯದ ಸಹಕಾರ ಅಗತ್ಯ. ಅದರಲ್ಲೂ ಕಲಿಕಾ ಸಾಮಗ್ರಿಗಳ ಪೂರೈಕೆಯಲ್ಲಿ ಹಲವಾರು ಕಂಪನಿಗಳು ಇತ್ತೀಚಿನ ದಿನಗಳಲ್ಲಿ ಸಹಕಾರ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಟೆಕ್ಸಾಸ್ ಕಂಪನಿಯ ಇಂತಹ ಕಾರ್ಯ ಆದರಣೀಯ ಎಂದರು.
ಸಮಾರಂಭದಲ್ಲಿ ಟೆಕ್ಸಾಸ್ ಸಂಸ್ಥೆಯ ಶಿವಂ, ಶುಭಂ, ಸಂಜೀವ ಪಲ್ಲೇದ, ಡಯಟ್ ಗದಗನ ಉಪನ್ಯಾಸಕ ಎಚ್.ಬಿ. ರಡ್ಡೇರ, ಇ.ಸಿ.ಓ ಉಮೇಶ ಹುಚ್ಚಯ್ಯನಮಠ, ಬಿ.ಆರ್.ಪಿ. ಈಶ್ವರ ಮೆಡ್ಲೇರಿ, ಬಿ.ಎಂ. ಯರಗುಪ್ಪಿ, ಎಂ.ಎಸ್. ಹಿರೇಮಠ, ಸಿ.ಆರ್.ಪಿ.ಗಳಾದ ಉಮೇಶ ನೇಕಾರ, ಸತೀಶ ಬೋಮಲೆ, ಸಿ.ವಿ. ವಡಕಣ್ಣವರ, ಮುಖ್ಯ ಶಿಕ್ಷಕ ಬಿ.ಎಂ. ಕುಂಬಾರ, ಡಿ.ಎನ್. ದೊಡ್ಡಮನಿ, ಎಸ್.ಎಸ್. ಜೀರಂಕಳ್ಳಿ ಹಾಗೂ ಶಾಲೆಯ ಶಿಕ್ಷಕ ಬಂಧುಗಳು ಹಾಜರಿದ್ದರು.