ಬಾಗಲಗುಂಟೆ: ಮಂಜುನಾಥನಗರ 2ನೇ ರಸ್ತೆ, ವಿಜಯಲಕ್ಷ್ಮಿ ಲೇಔಟ್‌ನ ಬಾಡಿಗೆ ಮನೆಯಲ್ಲಿ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅನೈತಿಕ ಸಂಬಂಧ ಹಿನ್ನೆಲೆ ಈ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಎರಡು ತಿಂಗಳ ಹಿಂದೆ ನಟರಾಜ್ ಸರಸ್ವತಿ ಇವರಿಂದ ಮೋಹನ್ ಕೃಷ್ಣ ಮತ್ತು ಊರ್ವಶಿ ಅವರಿಗೆ ಬಾಡಿಗೆ ನೀಡಲಾಗಿತ್ತು. ಇದೀಗ ಮೃತದೇಹ ಮೋಹನ್ ಕೃಷ್ಣ ಅಥವಾ ಯಾರು ಎಂಬುದು ಪರಿಶೀಲನೆಗೊಳಿಸಲಾಗುತ್ತಿದೆ. ದೇಹದ ಬಾಯಿಗೆ ಟೇಪ್ ಹಾಕಿ, ಕೈಕಾಲು ಕಟ್ಟಿರುವುದು ತನಿಖೆಯಲ್ಲಿ ದೃಢವಾಗಿದೆ.
ಕೊಳೆತ ಶವದಿಂದ ಬರುವ ದುರ್ವಾಸನೆ ಗಮನಿಸಿ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಮೃತದೇಹವನ್ನು ವಿಕ್ಟೋರಿಯಾ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.



