ಬಾಗಲಕೋಟೆ: ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ನರ್ಸ್ ಅಂತೇಳಿ 1 ದಿನದ ಹೆಣ್ಣು ಮಗು ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮಾಬೂಬಿ(30) ಎಂಬುವವರ ಮಗು ಕಳ್ಳತನ ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ನರ್ಸ್ ಎಂದು ಪರಿಚಯಿಸಿಕೊಂಡ ಮಹಿಳೆ, ಮಗುವಿನ ತಾಯಿಗೆ ಕಫಾ ತೆಗೆಸಬೇಕೆಂಬ ನಾಟಕವಾಡಿ ಮಗು ಕದ್ದೊಯ್ದಿದ್ದಾಳೆ.
ಮಗುವನ್ನು ಕೊಂಡೊಯ್ದ ಮಹಿಳೆ ಎಷ್ಟೊತ್ತಾದರೂ ಬರಲಿಲ್ಲವೆಂದು ಅನುಮಾನಗೊಂಡ ಮನೆಯವರು ಮಗುವನ್ನು ಹುಡುಕಲು ತೊಡಗಿದರು, ಆದರೆ ಎಲ್ಲಿಯೂ ಮಗು ಪತ್ತೆಯಾಗಲಿಲ್ಲ. ಇದರಿಂದಾಗಿ ತಕ್ಷಣವೇ ನವನಗರ ಠಾಣೆಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.



