ಗದಗ:- ನಗರದ ಬಸವೇಶ್ವರ ಸರ್ಕಲ್‌ನಲ್ಲಿ ಕಿತ್ತೂರರಾಣಿ ಚೆನ್ನಮ್ಮ ಮತ್ತು ಕನಕದಾಸರ ಜಯಂತೋತ್ಸವದ ಅಂಗವಾಗಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಆಗಮಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಹೂ ಮಳೆಗೈದು, ಪಟಾಕಿ ಸಿಡಿಸಿ ಸ್ವಾಗತ ಮಾಡಲಾಗಿದೆ. ಅಲ್ಲದೇ ಮುಂದಿನ ಮುಖ್ಯಮಂತ್ರಿ ಯತ್ನಾಳ್ ಎಂಬ ಘೋಷಣೆ ಕೂಡ ಮೊಳಗಿದ್ದವು. ಯತ್ನಾಳ್ ನೋಡಲು ನೂಕಾಟ, ತಳ್ಳಾಟ ನಡೆದಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟ ದೃಶ್ಯ ಕಂಡು ಬಂತು.
2028 ರಲ್ಲಿ ಮಾಡುವಂತ್ರಿ.. ಈಗ ಭಾಷಣ ಕೇಳಿ:
ಈ ವೇಳೆ ಯತ್ನಾಳ್ ಭಾಷಣ ಆರಂಭಿಸುವಂತೆ ಮತ್ತೆ ಮುಂದಿನ ಸಿಎಂ ಯತ್ನಾಳ್ ಎಂಬ ಘೋಷಣೆ ಮೊಳಗಿತ್ತು. ಈ ವೇಳೆ 2028 ರಲ್ಲಿ ಮಾಡುವಂತ್ರಿ.. ಈಗ ಭಾಷಣ ಕೇಳಿ ಎಂದು ಯತ್ನಾಳ್ ತಮಾಷೆ ಮಾಡಿದ್ದರು. ಈಗ ಕಸಾಯಿ ಖಾನೆ ಒಪನ್ ಮಾಡ್ತಿದ್ದಾರೆ. ನಾ ಬಂದ ಮೇಲೆ ಎಲ್ಲಾ ಸ್ಟಾಫ್ ಮಾಡ್ತೀನಿ. ಈಗ ಭಾಷಣ ಕೇಳಿ. ಮೂಡ್ ಹೋದ್ರಹೋಗೇಬಿಡುತ್ತೆ ಎಂದರು.
ಹೊಲಸುತನವು ಹೆಚ್ಚುತ್ತಿದೆ:
ಧರ್ಮ ಮತ್ತು ಸಮಾಜ ರಕ್ಷಣೆಗಾಗಿ ಜೆಸಿಬಿ ತರಬೇಕಾಗಿದೆ; ದೇವರುಗಳ ಮೇಲೆ ಕಲ್ಲು ಎಸೆಯಲಾಗುತ್ತಿರುವುದರಿಂದ ಹೊಲಸುತನವು ಹೆಚ್ಚುತ್ತಿದೆ ಎಂದು ಕಿಡಿಕಾರಿದರು. ಈಗ ಗ್ಯಾರಂಟಿ ಸರ್ಕಾರ ಬೇಡ.. ಸ್ವಾಭಿಮಾನಿಯಾಗಿ ಜೀವಿಸಲು ಅನುಕೂಲ ಕಲ್ಪಿಸುವ ಸರ್ಕಾರ ಬೇಕು. ದುಬೈ, ಮಾರಿಷಿಯಸ್ ನಲ್ಲಿ ನಾಯಕರು ಆಸ್ತಿಮಾಡಿದ್ದಾರೆ ಎಂದು ಹೆಸರು ಹೇಳದೇ ವಿಜಯೇಂದ್ರ ವಿರುದ್ದ ವಾಗ್ದಾಳಿ ಮಾಡಿದ್ದಾರೆ. ಜೆಸಿಬಿ ಕ್ರಾಂತಿ ಮೂಲಕ ಈ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಜನರ ಗಮನಕ್ಕೆ ತರುವುದು ಮುಖ್ಯವಾಗಿದೆ. ರೈತರ ಮೇಲೆ ನಿಜವಾದ ಕಾಳಜಿ ಇದ್ದರೆ ನೀರಾವರಿ ಯೋಜನೆಗಳು ಪೂರ್ಣಗೊಳ್ಳಬೇಕು, ಆಲಮಟ್ಟಿ ಡ್ಯಾಂ ಕಾರ್ಯಸಿದ್ಧವಾಗಬೇಕು ಎಂದು ಹೇಳಿದರು.
ಒಂದು ರಾತ್ರಿ ರೈತರ ಜೊತೆ ಮಲಗಿ ನಾಯಕರಾಗಲು ಹೊರಟಿದ್ದಾರೆ:
ಗದಗ ನಗರದಲ್ಲಿ 17 ಕೋಟಿ ವೆಚ್ಚದಲ್ಲಿ ಕಸಾಯಿಖಾನೆ ನಿರ್ಮಾಣ ಮಾಡ್ತಾಯಿದ್ದಾರೆ. ಆದ್ರೆ, ವಿಜಯಪೂರದಲ್ಲೂ ಅನುದಾನ ಬಂದಿತ್ತು. ಆದ್ರೆ ನಾನು ಅನುಮತಿ ನೀಡಿಲ್ಲ. ಒಂದು ರಾತ್ರಿ ರೈತರ ಜೊತೆ ಮಲಗಿ ರೈತ ನಾಯಕರಾಗಲು ಹೊರಟಿದ್ದಾರೆ ಎಂದು ಪರೋಕ್ಷವಾಗಿ ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ ಮಾಡಿದ್ದಾರೆ. ರಾಜ್ಯದಲ್ಲಿ 2.13 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದೆ. ಪೊಲೀಸ್ ಇಲಾಖೆ ಸೇರಿ ಹಲವು ಇಲಾಖೆ ಹುದ್ದೆ ಖಾಲಿ ಇದೆ. ಗ್ಯಾರಂಟಿ ಬೇಕಾಗಿಲ್ಲಿ. ಖಾಲಿ ಹುದ್ದೆ ತುಂಬಿದ್ರೆ ಬಿಪಿಎಲ್ ದಿಂದ ಮುಕ್ತ ಆಗ್ತಾರೆ ಎಂದರು.
ವಿಧಾನಸೌಧದಲ್ಲೂ ಗೂಂಡಾಗಿರಿ ನಡೀತಿದೆ:
ಸನಾತನ ಧರ್ಮ ಉಳಿಬೇಕು ಅಂದ್ರೆ ರಾಜ್ಯದಲ್ಲಿ ಜೆಸಿಬಿ ಬರ್ಬೇಕು. ಸನಾತನ ಧರ್ಮ, ಗಣಪತಿ, ನಾಡದೇವಿ ಮೇಲೆ ಕಲ್ಲು ತೂರ್ತಾರೆ. ಎಷ್ಟು ನೀಚತನ ಬಂದಿದೆ. ನಮ್ಮ ಕೂಡಿ ಬಾಳುವ ವಿಚಾರ ಇಲ್ಲ.. ವಿಧಾನಸೌದದಲ್ಲಿ ಡಿಕೆ ಶಿವಕುಮಾರ್ ನಮ್ಮ ಮಹಾನ್ ನಾಯಕರಿಗೆ ಅವಾಜ್ ಹಾಕ್ತಾನೆ. ನಿನ್ನ ಪೈಲ್ ನನ್ನ ಕಡೆ ಇದೆ ಅಂತ ಡಿಕೆಶಿವಕುಮಾರ್ ಅವಾಜ್ ಹಾಕ್ತಾನೆ. ಡಿಕೆಶಿ ನನಗೂ ಒಮ್ಮೆ ಅವಾಜ್ ಹಾಕಿದ್ದ. ಹೇ ಯತ್ನಾಳ ನೀ ನಮ್ಮ ಪಕ್ಷದಲ್ಲಿ ಇದ್ದಿದ್ರೆ ಪಕ್ಷದಿಂದ ಹೊರಗ ಹಾಕಿಬಿಡ್ತಿದ್ದೆ ಅಂತ ಅವಾಜ್ ಹಾಕಿದ್ದ. ನಿನ್ನಂತ ನಾಲಾಯಕ್ ಪಾರ್ಟಿಯೊಳಗೆ ಯಾ ಮಗಾ ಬರ್ತಾನೆ ಅಂದಿದ್ದೆ. ವಿಧಾನಸೌಧದಲ್ಲೂ ಗೂಂಡಾಗಿರಿ ನಡೀತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಎಲ್ಲಿಯವರೆಗೆ ಸನಾತ ಧರ್ಮ ಇರುತ್ತೆ ಅಲ್ಲಿಯವರೆಗೆ ಸಂವಿಧಾನ ಇರುತ್ತೆ:
ಯಾವ ಯಾವ ಮುಖ್ಯಮಂತ್ರಿಗಳು, ಮಾಜಿ ಹಾಲಿ ಮುಖ್ಯಮಂತ್ರಿ ಆಸ್ತಿ ಮಾಡಿದ್ದೀರಿ ಸರಕಾರಕ್ಕೆ ಬಿಟ್ಟು ಕೊಡ್ತೇನೆ ಅಂತ ಪ್ರಮಾಣಿಕರಿಸಿ. ಒಮ್ಮೆ ನಮಗೆ ಅವಕಾಶ ಕೊಡಿ ಈ ಕರ್ನಾಟಕದ ಚಿತ್ರಣವನ್ನೇ ಬದಲಾಯಿಸಿ ಬಿಡ್ತೇನೆ. ಜನ ಕೊಟ್ಟ ಅಧಿಕಾರವನ್ನ ಒಂದೊಳ್ಳೆ ಸರಕಾರ ಕೊಡ್ತೇನೆ. ಬಿಜೆಪಿ ಬಂದರೆ ಸಂವಿಧಾನ ಬದಲಾವಣೆ ಮಾಡಲ್ಲ. ಅಂಬೇಡ್ಕರ್ ಅವರನ್ನ ಎರಡು ಬಾರಿ ಸೋಲಿಸಿದವರು ಕಾಂಗ್ರೆಸ್ ನವರು. ಎಲ್ಲಿಯವರೆಗೆ ಸನಾತ ಧರ್ಮ ಇರುತ್ತೆ ಅಲ್ಲಿಯವರೆಗೆ ಸಂವಿಧಾನ ಇರುತ್ತೆ.. ಆದ್ರೆ ಮುಸ್ಲಿಂರನ್ನ ಕೇಳಿ ಖುರಾನ್ ಶ್ರೇಷ್ಠ ಅಥವಾ ಸಂವಿಧಾನ ಶ್ರೇಷ್ಠ ಅಂತ ಕೇಳಿದ್ರೆ ಖುರಾನ್ ಅಂತಾರೆ. ಎಸ್ ಡಿ ಪಿ ಐ, ಪಿ ಎಫ್ ಐ ರೆಜಿಸ್ಟರ್ ಆಗಿದ್ದಾವಾ? ಇವರು ವಿಧಾನಸೌದದಲ್ಲಿ ಕೆಲವರು ಅವರಿಗೇನೆ ಹುಟ್ಟಿದಂಗೆ ಜಿಗದಾಡ್ತಾರೆ…ಎಕ್ಸಪೆಲ್ ಮಾಡಿದ ಯತ್ನಾಳೇ ಮುಂದಿನ ಬಾರಿ ಮುಖ್ಯಮಂತ್ರಿ ಆಗ್ತಾನೆ ನಿಮ್ಮನ್ನೂ ದೇವೇಗೌಡರೂ ಎಕ್ಸಪೆಲ್ ಮಾಡಿದ್ದಕ್ಕೆ ಸಿಎಂ ಆದ್ರಿ.
ನಾನು ಎಕ್ಸಪೆಲ್ ಆಗಿನಿ ನಾನು 2028 ಮುಖ್ಯಮಂತ್ರಿ ಆಗ್ತಿನಿ ಎಂದು ಸಿದದರಾಮಯ್ಯ ಅವರಿಗೆ ಸವಾಲ್ ಹಾಕಿದ್ದಾರೆ.
ದೇಶದ್ರೋಹಿಗಳಿಗೆ ಜೈಲಿನಲ್ಲಿ ಸವಲತ್ತು ಸಿಗುತ್ತಿದೆ:
ಕಾಂಗ್ರೆಸ್ ಸರ್ಕಾರದಿಂದ ದೇಶದ್ರೋಹಿಗಳಿಗೆ ಜೈಲಿನಲ್ಲಿ ಸವಲತ್ತು ಸಿಗುತ್ತಿದೆ, ಸಮಗ್ರ ತನಿಖೆ ಆಗಿ ಸಂಬಂಧಿಸಿದವರ ವಿರುದ್ಧ ಶಿಕ್ಷೆ ವಿಧಿಸಬೇಕು. ಜೈಲು ವಿಶ್ರಾಂತಿ ಧಾಮವಲ್ಲ, ಶಿಸ್ತು ಕಡ್ಡಾಯ ಎಂದರು. ಈ ವೇಳೆ ಯತ್ನಾಳ, ಕಬ್ಬು ದರ ಮತ್ತು ಸಕ್ಕರೆ ಕಾರ್ಖಾನೆಗಳ ಸಮಸ್ಯೆಯತ್ತ ಗಮನ ಸೆಳೆದರು. “ಸರ್ಕಾರ ವ್ಯವಸ್ಥಿತವಾಗಿ ಮೋಸ ಮಾಡುತ್ತಿದೆ. ಕಾರ್ಖಾನೆಗಳು ಉತ್ಪಾದಿಸಿದ ವಿದ್ಯುತ್ ಖರೀದಿಸದಿದ್ದರೆ ರೈತರಿಗೆ ಲಾಭ ಏರುತ್ತಿಲ್ಲ. ಆಡಳಿತ ಮಂಡಳಿಯ ಭ್ರಷ್ಟಾಚಾರ, ಲೂಟಿ ನಿಲ್ಲಿಸಬೇಕು. ರೈತರ ಬಾಕಿ ಪರಿಹರಿಸಬೇಕು” ಎಂದು ಅವರು ಹೇಳಿದರು.
ಇನ್ನು ಮುಂದಿನ ಸಿಎಂ ಸ್ಥಾನ, ಪಕ್ಷದ ಗೊಂದಲ ಮತ್ತು ನವೆಂಬರ್ ಕ್ರಾಂತಿಯ ಹಿನ್ನೆಲೆಗಳ ಕುರಿತು ಅವರು ಮಾತನಾಡಿದರು. “ತುಳು ದೈವ ಡಿಕೆಶಿ ಸಿಎಂ ಆಗುತ್ತಾನೆ ಎಂದರೆ ನಾವು ಏನು ಮಾಡೋದು? ಸಿದ್ದರಾಮಯ್ಯ ಅವರೇ ಮುಂದುವರೆಯುವುದು ಒಳ್ಳೆಯದು. ಆದರೆ ಅವರ ಮೌನದ ಕಾರಣ ಗೊತ್ತಿಲ್ಲ, ರಾಜಣ್ಣ ನಿಯೋಗ ಕಾರ್ಯ ನಿರ್ವಹಿಸುತ್ತಿದ್ದಾರೆ” ಎಂದು ಯತ್ನಾಳ ಅಭಿಪ್ರಾಯ ವ್ಯಕ್ತಪಡಿಸಿದರು.


