ವಿಜಯಪುರ: ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ನಾಲ್ವರು ಆರೋಪಿಗಳನ್ನು 14-ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಪ್ರಕಾಶ್ ಅಲಿಯಾಸ್ ಪಿಂಟ್ಯಾ ಮೇಲಿನಕೇರಿ,
Advertisement
ರಾಹುಲ್ ತಳಕೇರಿ, ಮಣಿಕಂಠ ಬೆನಕೊಪ್ಪ ಮತ್ತು ಸುದೀಪ್ ಕಾಂಬಳೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ಆರೋಪಿಗಳನ್ನು ದರ್ಗಾ ಜೈಲಿಗೆ ಕರೆದೊಯ್ಯಲಾಗಿದೆ.
ಆಸ್ತಿ ವಿಚಾರವಾಗಿ ಈ ಹಿಂದೆ ರವಿ ಅಗರಖೇಡ್ ಹಾಗೂ ಬಾಗಪ್ಪ ನಡುವೆ ಗಲಾಟೆ ನಡೆದಿತ್ತು. ಇದೇ ಕಾರಣಕ್ಕಾಗಿ ಬಾಗಪ್ಪನ ಶಿಷ್ಯರು ರವಿಯನ್ನು ಹತ್ಯೆ ಮಾಡಿದ್ದರು. ರವಿ ಹತ್ಯೆಗೆ ಪ್ರತಿಕಾರವಾಗಿ ಆತನ ತಮ್ಮ ಪ್ರಕಾಶ ಮೇಲಿನಕೇರಿ ಸೇಡು ತಿರಿಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು.