ನಂದಮೂರಿ ಬಾಲಕೃಷ್ಣ ನಟನೆಯ ಡಾಕು ಮಹಾರಾಜ್ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಸಿತಾರಾ ಎಂಟರ್ಟೈನ್ಮೆಂಟ್ಸ್ ಎರಡು ನಿಮಿಷಗಳ ಅವಧಿಯ ವೀಡಿಯೊವನ್ನು ಶೇರ್ ಮಾಡಿದ್ದು, ಚಿತ್ರದಲ್ಲಿ ಊರ್ವಶಿ ರೌಟೇಲಾ ಹಾಗೂ ಖಳನಾಯಕನ ಪಾತ್ರದಲ್ಲಿ ಬಾಬಿ ಡಿಯೋಲ್ ಮಿಂಚಿದ್ದಾರೆ.
ಡಾಕು ಮಹಾರಾಜ್ ಸಿನಿಮಾ ಜನವರಿ 12 ರಂದು ವಿಶ್ವದಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಲಿದೆ. ಬಾಬಿ ಕೊಲ್ಲಿ ಅವರು ‘ಡಾಕು ಮಹಾರಾಜ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಬಾಲಯ್ಯ ಎದುರು ವಿಲನ್ ಆಗಿ ಬಾಲಿವುಡ್ ನಟ ಬಾಬಿ ಡಿಯೋಲ್ ಅವರು ನಟಿಸಿದ್ದಾರೆ. ಇದು ಅವರ ಮೊದಲ ತೆಲುಗು ಸಿನಿಮಾ. ಈಗಾಗಲೇ ತಮಿಳಿನಲ್ಲಿ ಸೂರ್ಯ ಎದುರು ವಿಲನ್ ಆಗಿ ಆರ್ಭಟಿಸಿದ ಬಾಬಿ ಡಿಯೋಲ್ ಅವರು ಈಗ ಟಾಲಿವುಡ್ನಲ್ಲಿ ಮತ್ತೆ ಸದ್ದು ಮಾಡಲಿದ್ದಾರೆ.
‘ಡಾಕು ಮಹಾರಾಜ್’ ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣ ಎರಡು ಗೆಟಪ್ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಬಾಲಯ್ಯ ಜೊತೆ ಪ್ರಗ್ಯಾ ಜೈಸ್ವಾಲ್, ಚಾಂದಿನಿ ಚೌದರಿ, ಕನ್ನಡದ ನಟಿ ಶ್ರದ್ಧಾ ಶ್ರೀನಾಥ್ ಕೂಡ ನಟಿಸಿದ್ದಾರೆ.