ಗದಗ:- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಸಾರಿಗೆ ನೌಕರರು ಕರ್ನಾಟಕದಾದ್ಯಂತ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ.
ಬಂದ್ ಹಿನ್ನೆಲೆ, ಗದಗ ಜಿಲ್ಲೆಯಲ್ಲಿ ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಬ್ದವಾಗಿದೆ. ಗದಗ ಬಸ್ ನಿಲ್ದಾಣದಲ್ಲಿ NCC ವಿದ್ಯಾರ್ಥಿನಿಯರು ಬಸ್ ಇಲ್ಲದೇ ಪರದಾಟ ನಡೆಸಿದ್ದಾರೆ. ನೀರು, ಉಪಹಾರವಿಲ್ಲದೇ ವಿದ್ಯಾರ್ಥಿನಿಯರು ಸಂಕಟ ಅನುಭವಿಸಿದ್ದಾರೆ.
ಗುಲ್ಬರ್ಗಾದಿಂದ ನಸುಕಿನ ಜಾವ 4 ಗಂಟೆಗೆ ವಿದ್ಯಾರ್ಥಿಗಳು ಆಗಮಿಸಿದ್ದು, ಧಾರವಾಡ ಜಿಲ್ಲೆಯ ನವಲಗುಂದಕ್ಕೆ ಹೋಗಲು ಪರದಾಟ ನಡೆಸಿದ್ದಾರೆ. ಬಂದ್ ಎಫೆಕ್ಟ್ ಗದಗ ಜಿಲ್ಲೆಗೂ ತಟ್ಟಿದ್ದು, ಕರ್ತವ್ಯಕ್ಕೆ ಸಿಬ್ಬಂದಿಗಳು ಹಾಜರಾಗದ ಪರಿಣಾಮ ರಸ್ತೆಗೆ ಸಾರಿಗೆ ಬಸ್ ಗಳು ಇಳಿದಿಲ್ಲ. ಈ ಮೂಲಕ ಜಿಲ್ಲೆಯಾದ್ಯಂತ ಮುಷ್ಕರಕ್ಕೆ ವ್ಯಾಪಕ ಬೆಂಬಲ ಸಿಕ್ಕಿದೆ.
ಮುಷ್ಕರಕ್ಕೆ 2319 ಜಿಲ್ಲೆಯ ಸಾರಿಗೆ ನೌಕರರ ಬೆಂಬಲ ಸಿಕ್ಕಿದೆ. ಜಿಲ್ಲೆಯಾದ್ಯಂತ 561 ಶೆಡೂಲ್, 584 ಬಸ್ ಗಳ ಕಾರ್ಯಾಚರಣೆ ಸ್ಥಗಿತವಾಗಿದೆ. ಪರ್ಯಾಯವಾಗಿ ಜಿಲ್ಲಾಡಳಿತ ದಿಂದ 276 ಖಾಸಗಿ ವಾಹನದ ವ್ಯವಸ್ಥೆ ಮಾಡಲಾಗಿದೆ. ಆದರೆ ಖಾಸಗಿ ವಾಹನಗಳು ಇದುವರೆಗೂ ರಸ್ತೆಗೆ ಇಳಿದಿಲ್ಲ. ಹೀಗಾಗಿ ಕಾದು-ಕಾದು ಸುಸ್ತಾದ ಅಧಿಕಾರಿಗಳ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ.