ಬೆಂಗಳೂರು:- ಬೆಂಗಳೂರಿನ ವಿಧಾನಸೌಧ ಮುಖ್ಯ ರಸ್ತೆಯಲ್ಲಿ ತಡರಾತ್ರಿ ಪುಂಡರು ಬೈಕ್ ವ್ಹೀಲಿಂಗ್ ನಡೆಸಿ ಹುಚ್ಚಾಟ ನಡೆಸಿದ್ದಾರೆ.
ರಾತ್ರಿ 2:30ರ ಸುಮಾರಿಗೆ ಹೈಗ್ರೌಂಡ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ರ‍್ಯಾಶ್ ಡ್ರೈವಿಂಗ್ ಮಾಡಿದ್ದಲ್ಲದೆ, ವ್ಹೀಲಿಂಗ್ ಕೂಡ ಮಾಡುವ ಮೂಲಕ ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಲಾಗಿದೆ.
ಹೆಲ್ಮೆಟ್ ಧರಿಸದೆ, ತ್ರಿಬಲ್ ರೈಡಿಂಗ್ ಮಾಡಲಾಗಿರುವ ದೃಶ್ಯಗಳು ಕಂಡುಬಂದಿದ್ದು, ಬೈಕ್ಗಳ ಸೈಲೆನ್ಸರ್‌ಗಳನ್ನು ಆಲ್ಟರ್ ಮಾಡಿ ಕರ್ಕಶ ಶಬ್ದದೊಂದಿಗೆ ಪುಂಡಾಟ ನಡೆಸಲಾಗಿದೆ. ಅಷ್ಟೇ ಅಲ್ಲ ಕ್ಯಾಮೆರಾ ಕಂಡ ತಕ್ಷಣ ನಂಬರ್ ಪ್ಲೇಟ್‌ಗಳನ್ನು ಕೈಯಿಂದ ಮರೆಮಾಚುವ ಪ್ರಯತ್ನವೂ ನಡೆದಿವೆ ಎಂಬುವುದು ತಿಳಿದು ಬಂದಿದೆ.



