ಬೆಂಗಳೂರು| ವೇಶ್ಯವಾಟಿಕೆ ನಡೆಯುತ್ತಿದ್ದ ಸ್ಪಾ ಮೇಲೆ ಸಿಸಿಬಿ ರೇಡ್!

0
Spread the love

ಬೆಂಗಳೂರು:- ಸ್ಪಾ ಸೆಂಟರ್ ಹೆಸರಿನಲ್ಲಿ ವೇಶ್ಯವಾಟಿಕೆ ದಂಧೆ ನಡೆಸುತ್ತಿರುವ ಅನುಮಾನದ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ.

Advertisement

ರಿಚ್‌ಮಂಡ್ ಟೌನ್‌ನಲ್ಲಿರುವ Pixies Spa ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ವೇಶ್ಯವಾಟಿಕೆ ನಡೆಸುತ್ತಿರುವ ಅನುಮಾನದ ಮೇಲೆ ಎಸಿಪಿ ಧರ್ಮೇಂದ್ರ ರವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಈ ವೇಳೆ ಬಾಂಗ್ಲಾದೇಶ ಮೂಲದ ಡಿಂಪಲ್ ಎಂಬ ಯುವತಿ ಪತ್ತೆಯಾಗಿದ್ದಾಳೆ. ಈಕೆ ಬಾಂಗ್ಲಾದೇಶದ ಜಯಶೋರ್ ಜಿಲ್ಲೆಯ ಕುಲ್ನಾ ಪ್ರದೇಶಕ್ಕೆ ಸೇರಿದವಳು ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಸ್ತುತ ಸಿಸಿಬಿ ಪೊಲೀಸರು ಸ್ಪಾದಲ್ಲಿ ತೀವ್ರ ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here