ಬೆಂಗಳೂರು:- ಟಿಪ್ಪರ್ ಲಾರಿ ಹರಿದು ಪೌರ ಕಾರ್ಮಿಕ ಮಹಿಳೆ ದುರ್ಮರಣ ಹೊಂದಿರುವ ಘಟನೆ ವಿಜಯನಗರದ ಶಿವನಹಳ್ಳಿ ಸಿಗ್ನಲ್ ಬಳಿ ಇಂದು ಮುಂಜಾನೆ ಜರುಗಿದೆ. 51 ವರ್ಷದ ಸರೋಜಮ್ಮ ಮೃತ ಮಹಿಳೆ. ಇವರು ಶ್ರೀರಾಂಪುರ ನಿವಾಸಿ ಎನ್ನಲಾಗಿದೆ.
Advertisement
ಕೆಲಸಕ್ಕೆ ಹಾಜರಾಗಲು ಹೋಗುತ್ತಿದ್ದಾಗ ಸರೋಜಮ್ಮಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರರಕ್ತಸ್ರಾವವಾಗಿ ಮಹಿಳೆ ಸಾವನ್ನಪ್ಪಿದ್ದಾರೆ.
ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ವಿಜಯನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನೆ ಸಂಬಂಧ ವಿಜಯನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.