ಬೆಂಗಳೂರು: ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಮತ್ತು ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಎಂಜಿ ರಸ್ತೆ ಮತ್ತು ಕೋರಮಂಗಲದ ಇಬ್ಬರು ವಿದೇಶಿ ಡಿಜೆಗಳನ್ನು ಡ್ರಗ್ಸ್ ಪೆಡ್ಲಿಂಗ್ ಆರೋಪದ ಮೇಲೆ ಬಂಧಿಸಿದ್ದಾರೆ.
ಸಿಸಿಬಿ ಅಧಿಕಾರಿಗಳಿಗೆ ನಗರದಲ್ಲಿ ನಡೆಯುತ್ತಿರುವ ಐಷಾರಾಮಿ ಟೆಕ್ನೋ ಪಾರ್ಟಿಗಳಲ್ಲಿ ಡ್ರಗ್ಸ್’ಗಳ ಬಳಕೆ ಮತ್ತು ವಿತರಣೆಯ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆ, ಡಿಜೆಗಳಾಗಿ ಪಬ್ಗಳಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ವಿದೇಶಿಗರನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಆರೋಪಿಗಳು ಪಬ್‌ಗಳಿಂದಲೇ ಯುವಕರನ್ನು ಸಂಪರ್ಕ ಮಾಡಿ ಡ್ರಗ್ಸ್ ರವಾನಿಸುತ್ತಿದ್ದರು.
ಅಷ್ಟೇ ಅಲ್ಲದೇ ಹೊರಗಿನ ಐಷಾರಾಮಿ ಪಾರ್ಟಿಗಳಿಗೂ ಡ್ರಗ್ಸ್ ಸರಬರಾಜು ಮಾಡ್ತಿರೋದು ಗೊತ್ತಾಗಿದೆ. ವಿಚಾರಣೆ ವೇಳೆ ವಿದ್ಯಾಭ್ಯಾಸ ವೀಸಾದಲ್ಲಿ ಬಂದಿರುವ ಹಲವರು, ವೀಸಾ ಅವಧಿ ಮುಗಿದ ನಂತರವೂ ಇಲ್ಲೇ ಉಳಿದುಕೊಂಡು ಡ್ರಗ್ಸ್ ಪೆಡ್ಲರ್‌ಗಳಾಗಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.