HomeKarnataka Newsಕಮರ್ಷಿಯಲ್ LPG ಸಿಲಿಂಡರ್‌ಗಳ ಕೊರತೆ: ಪ್ರಧಾನಿ ಮೋದಿಗೆ ಪತ್ರ ಬರೆದ ಬೆಂಗಳೂರು ಹೋಟೆಲ್​​ ಅಸೋಸಿಯೇಷನ್​​!

ಕಮರ್ಷಿಯಲ್ LPG ಸಿಲಿಂಡರ್‌ಗಳ ಕೊರತೆ: ಪ್ರಧಾನಿ ಮೋದಿಗೆ ಪತ್ರ ಬರೆದ ಬೆಂಗಳೂರು ಹೋಟೆಲ್​​ ಅಸೋಸಿಯೇಷನ್​​!

For Dai;y Updates Join Our whatsapp Group

Spread the love

ಬೆಂಗಳೂರು:- ರಾಜ್ಯದಲ್ಲಿ ವಾಣಿಜ್ಯ LPG ಸಿಲಿಂಡರ್‌ಗಳ ಅಭಾವ ಹೆಚ್ಚಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಗಳೂರು ಹೋಟೆಲ್​​ ಅಸೋಸಿಯೇಷನ್​​ ಪತ್ರ ಬರೆದಿದೆ.

ಸಿಲಿಂಡರ್ ಕೊರತೆಯಿಂದ ಲಕ್ಷಾಂತರ ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ, ಅನೇಕ ಹೋಟೆಲ್‌ಗಳು ಮುಚ್ಚುವ ಭೀತಿಯಲ್ಲಿವೆ. ಹೀಗಾಗಿ ಸಿಲಿಂಡರ್ ಪೂರೈಕೆಗೆ ನಿರ್ದೇಶನ ಮತ್ತು ಈ ಸಮಸ್ಯೆ ಕುರಿತು ಚರ್ಚಿಸಲು ಭೇಟಿಗೆ ಸಮಯ ನೀಡುವಂತೆ ಆಗ್ರಹಿಸಲಾಗಿದೆ.

ಪತ್ರದಲ್ಲಿ ಏನಿದೆ?

ಕರ್ನಾಟಕ ರಾಜಧಾನಿ ಬೆಂಗಳೂರು ನಗರದಲ್ಲೇ 40,000ಕ್ಕೂ ಹೆಚ್ಚು ಹೋಟೆಲ್‌ಗಳು ಕಾರ್ಯನಿರ್ವಹಿಸುತ್ತಿವೆ. ನಾವು ಅಗತ್ಯ ಸೇವೆಗಳ ವಿಭಾಗಕ್ಕೆ ಸೇರಿದ್ದು, ಪ್ರಸ್ತುತ ವಾಣಿಜ್ಯ LPG ಸಿಲಿಂಡರ್‌ಗಳ ಕೊರತೆ ಮತ್ತು ಸರಬರಾಜಿನ ವ್ಯತ್ಯಯದಿಂದ ನಾವು ಗಂಭೀರ ಸಂಕಷ್ಟವನ್ನು ಎದುರಿಸುತ್ತಿದ್ದೇವೆ. ಈ ತುರ್ತು ಪರಿಸ್ಥಿತಿಯಲ್ಲಿ, ದಯವಿಟ್ಟು ಪೆಟ್ರೋಲಿಯಂ ಸಚಿವರಿಗೆ ಸೂಚನೆ ನೀಡಿ ನಮ್ಮ ದೈನಂದಿನ LPG ಅಗತ್ಯದ ಕನಿಷ್ಠ ಶೇ.50ರಷ್ಟು ಸರಬರಾಜು ಮಾಡಲು ಸಹಕರಿಸಬೇಕೆಂದು ಕೇಳಿಕೊಳ್ಳುತ್ತಿದ್ದೇವೆ.

ವಾಣಿಜ್ಯ LPG ಸರಬರಾಜು ಸಂಪೂರ್ಣವಾಗಿ ನಿಂತಿರುವುದು ಸುಮಾರು 40,000 ಸ್ವಯಂ ಉದ್ಯೋಗ ಹೊಂದಿರುವ ಹೋಟೆಲ್ ಮಾಲೀಕರಿಗೂ ಮತ್ತು ಈ ಕ್ಷೇತ್ರದ ಮೇಲೆ ಅವಲಂಬಿತವಾಗಿರುವ 6 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಭಾರೀ ಹೊಡೆತವಾಗಿದೆ. ಇದಲ್ಲದೆ, ನಮ್ಮ ಅಡುಗೆಮನೆಗಳಲ್ಲಿ ಬಳಕೆಯಾಗುವ ಹಾಲು, ಹಣ್ಣುಗಳು ಮತ್ತು ತರಕಾರಿಗಳಂತಹ ಕೃಷಿ ಉತ್ಪನ್ನಗಳ ಮೇಲೂ ಇದು ಪರಿಣಾಮ ಬೀರುತ್ತದೆ. ಜೊತೆಗೆ, ನಾವು ಪ್ರತಿದಿನ ಸಾಮಾನ್ಯ ಜನರಿಗೆ ಉಚಿತ ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯಗಳನ್ನೂ ಒದಗಿಸುತ್ತೇವೆ. ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿ, ಪ್ರಸ್ತುತ ವಾಣಿಜ್ಯ LPG ಸಮಸ್ಯೆಗಳು ಮತ್ತು ನಮ್ಮ ಆತಂಕಗಳ ಬಗ್ಗೆ ಚರ್ಚಿಸಲು ನಿಮ್ಮೊಂದಿಗೆ ಭೇಟಿಗೆ ಅವಕಾಶ ನೀಡುವಂತೆ ಕೋರುವುದಾಗಿ ಪತ್ರದಲ್ಲಿ ಆಗ್ರಹಿಸಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!