HomeSports Newsಏಕದಿನ ಕ್ರಿಕೆಟ್‌ʼಗೆ ವಿದಾಯ ಹೇಳಿದ ಬಾಂಗ್ಲಾ ಬ್ಯಾಟರ್‌ ಮುಶ್ಫೀಕರ್‌ ರಹೀಂ!

ಏಕದಿನ ಕ್ರಿಕೆಟ್‌ʼಗೆ ವಿದಾಯ ಹೇಳಿದ ಬಾಂಗ್ಲಾ ಬ್ಯಾಟರ್‌ ಮುಶ್ಫೀಕರ್‌ ರಹೀಂ!

For Dai;y Updates Join Our whatsapp Group

Spread the love

ಪಾಕಿಸ್ತಾನ ಮತ್ತು ಯುಎಇ ಆಯೋಜಿಸಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ತಂಡವು ಬೇಗನೆ ಹೊರಬಿದ್ದ ನಂತರ, ಬಾಂಗ್ಲಾದೇಶದ ಮಾಜಿ ನಾಯಕ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮುಷ್ಫಿಕರ್ ರಹೀಂ ಏಕದಿನ ಅಂತರರಾಷ್ಟ್ರೀಯ (ODI) ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ್ದಾರೆ.

ಬಾಂಗ್ಲಾದೇಶ್ ಪರ 274 ಏಕದಿನ ಪಂದ್ಯಗಳನ್ನಾಡಿರುವ ಮುಶ್ಫಿಕುರ್ ರಹೀಮ್ 256 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ ಒಟ್ಟು 7795 ರನ್ ಕಲೆಹಾಕಿದ್ದಾರೆ. ಇದರ ನಡುವೆ 9 ಶತಕ ಹಾಗೂ 49 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದೀಗ 37ನೇ ವಯಸ್ಸಿಗೆ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಮುಶ್ಪಿಕುರ್ ರಹೀಮ್ ಮುಂಬರುವ ದಿನಗಳಲ್ಲಿ ಟೆಸ್ಟ್ ತಂಡದಲ್ಲಿ ಮುಂದುವರೆಯಲು ನಿರ್ಧರಿಸಿದ್ದಾರೆ.

ಅತ್ತ ಸ್ಟೀವ್ ಸ್ಮಿತ್ ಕೂಡ ಟೆಸ್ಟ್ ಹಾಗೂ ಟಿ20 ತಂಡಗಳಲ್ಲಿ ಕಾಣಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ 2024ರ ಟಿ20 ವಿಶ್ವಕಪ್​ ತಂಡದಲ್ಲಿ ಸ್ಟೀವ್ ಸ್ಮಿತ್​ಗೆ ಸ್ಥಾನ ನೀಡಲಾಗಿರಲಿಲ್ಲ. ಹೀಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್​ ಮುಂಬರುವ ದಿನಗಳಲ್ಲಿ ಸ್ಮಿತ್ ಅವರನ್ನು ಟಿ20 ಕ್ರಿಕೆಟ್​ಗೆ ಪರಿಗಣಿಸುವ ಸಾಧ್ಯತೆಯಿಲ್ಲ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!