ಹುಬ್ಬಳ್ಳಿ: ನಕಲಿ ಖಾತೆ ಸೃಷ್ಟಿಸಿ ಅವ್ಯವಹಾರ ನಡೆಸಿದ್ದ ಸೈಬರ್ ವಂಚಕರನ್ನು ಹುಬ್ಬಳ್ಳಿ ಸೈಬರ್ ಕ್ರೈಮ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ದೆಹಲಿ ಹಾಗೂ ಮುಂಬೈನಲ್ಲಿ ಮೂವರನ್ನು ಬಂಧಿಸಲಾಗಿದ್ದು, ದೆಹಲಿ ಮೂಲದ ನಿಖಿಲ್ ಕುಮಾರ್ ರೌನಿ, ಸಚಿನ್ ಬೋಲಾ ಮತ್ತು ಮುಂಬೈ ಮೂಲದ ನಿಗಮ್ ಬಂಧಿತರಾಗಿದ್ದಾರೆ. ಇದರಲ್ಲಿ ಇಬ್ಬರು ಸಾಫ್ಟವೇರ್ ಇಂಜಿನಿಯರ್ ಆಗಿದ್ದು, ಓರ್ವ ಬಟ್ಟೆ ವ್ಯಾಪಾರಿಯಾಗಿದ್ದಾನೆ.
Advertisement
ವಂಚನೆ ಕುರಿತು ಕೆಲ ದಿನಗಳ ಹಿಂದೆ ಹುಬ್ಬಳ್ಳಿಯ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ಆಧರಿಸಿ ಬ್ಯಾಂಕ್ ಖಾತೆಯ ವಿವರ, ವಿಳಾಸ ಹಾಗೂ ಮೊಬೈಲ್ ಸಂಪರ್ಕದ ಜಾಡು ಹಿಡಿದು ಹೊರಟ ಪೊಲೀಸರು, ಇದೀಗ ಮೂವರನ್ನು ಒಂದೊಂದು ಕಡೆಗಳಲ್ಲಿ ಬಂಧಿಸಿದ ಹುಬ್ಬಳ್ಳಿ ಸೈಬರ್ ಕ್ರೈಮ್ ಪೊಲೀಸರು, ಆರೋಪಿಗಳನ್ನು ಜೈಲಿಗಟ್ಟಿ ಪ್ರಕರಣ ದಾಖಲಿಸಿದ್ದಾರೆ.
ಈ ವಂಚಕರನ್ನು ಯಾವ ಕಾರಣಕ್ಕೂ ಜೈಲಿನಿಂದ ಹೊರ
ಬಿಡದಂತೆ ಗಂಭೀರ ಸ್ವರೂಪದ ಶಿಕ್ಷೆಗೆ ಗುರಿಪಡಿಸಿ ಇವರ
ಮೂಲ ಕಂಡುಹಿಡಿಯಲು ಸೈಬರ್ ಪೋಲಿಸರು ಪ್ರಯತ್ನ
ಮುಂದುವರೆಸಿ ದೇಶದ ಜನತೆಯಲ್ಲಿ ಸುರಕ್ಷತೆ ಬಾವನೆ
ಸದೃಡಗೊಳಿಸಬೇಕು.ಸೈಬರ ಪೋಲಿಸ್ ವಿಭಾಗದ ಕ್ರಮ ಕ್ಕೆ ಅಭಿನಂಧನೆಗಳು