ಮುಂಬೈ:- ಡೆತ್ ನೋಟ್ ಬರೆದಿಟ್ಟು ಬ್ಯಾಂಕ್ ಮ್ಯಾನೇಜರ್ ಸೂಸೈಡ್ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಜರುಗಿದೆ.
ಜಿಲ್ಲೆಯ ಬಾರಾಮತಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಮ್ಯಾನೇಜರ್ ಶಿವಶಂಕರ್ ಮಿತ್ರ ಮೃತ ದುರ್ದೈವಿ. ಮಿತ್ರ ಅವರು ಆರೋಗ್ಯ ಸಮಸ್ಯೆಗಳು ಮತ್ತು ಕೆಲಸದ ಒತ್ತಡದಿಂದಾಗಿ ಜುಲೈ 11ರಂದು ಬ್ಯಾಂಕ್ ಮ್ಯಾನೇಜರ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈಗ ಆಫೀಸ್‌ನ ನೋಟಿಸ್ ಪಿರೇಡನ್ನು ಮಾಡುತ್ತಿದ್ದರು.
ಸಂಜೆ ಕೆಲಸದ ಮುಗಿದ ಬಳಿಕ ಮಿತ್ರ ಅವರು ನಾನೇ ಬ್ಯಾಂಕ್ ಬೀಗ ಹಾಕುವುದಾಗಿ ಹೇಳಿ ಎಲ್ಲರನ್ನು ಕಳುಹಿಸಿದ್ದರು. ಅಲ್ಲದೇ ಈ ಮೊದಲೇ ಅವರು ಸಹೊದ್ಯೋಗಿಯೊಂದಿಗೆ ಹಗ್ಗ ತರಲು ಹೇಳಿದ್ದರು ಎನ್ನಲಾಗಿದೆ. ಬ್ಯಾಂಕ್ ವಾಚ್‌ಮ್ಯಾನ್ ಸಹ ರಾತ್ರಿ 9 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ತೆರಳಿದ್ದರು.
ಇದನ್ನೇ ಕಾಯುತ್ತಿದ್ದ ಮಿತ್ರ ಅವರು 10 ಗಂಟೆ ಸುಮಾರಿಗೆ ಅದೇ ಹಗ್ಗದಿಂದ ಕಚೇರಿಯ ಸೀಲಿಂಗ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ದೃಶ್ಯವು ಬ್ಯಾಂಕ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.