ಬೆಂಗಳೂರು: ಪಬ್ ನ ಬಾತ್ ರೂಮ್ ನಲ್ಲಿ ಬ್ಯಾಂಕ್ ಮ್ಯಾನೇಜರ್ ಅನುಮಾಸ್ಪದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಆರ್ ಆರ್ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೇಘರಾಜ್ (31) ಪಬ್ ನಲ್ಲಿ ಶವವಾಗಿ ಪತ್ತೆಯಾದ ವ್ಯಕ್ತಿಯಾಗಿದ್ದು, ತನ್ನ ಮೂವರು ಸ್ನೇಹಿತರ ಜೊತೆ ಆರ್ ಆರ್ ನಗರದ 1522 ಪಬ್ ಗೆ ಹೋಗಿದ್ದರು.
ರಾತ್ರಿ ಎಲ್ಲರೂ ಕುಡಿದು ಪಾರ್ಟಿ ಮಾಡಿ ಊಟ ಮಾಡಿದ್ರು.. ರಾತ್ರಿ ಮನೆಗೆ ಹೋಗುವಾಗ ಎಲ್ಲರೂ ಪಬ್ ನಿಂದ ಕೆಳಗೆ ಬಂದಿದ್ರು. ಈ ವೇಳೆ ಬಾತ್ ರೂಮಿಗೆ ಅಂತಾ ಹೋಗಿ ಬರ್ತೀನಿ ಅಂತಾ ವಾಪಸ್ ಹೋಗಿದ್ದ ಮೇಘರಾಜ್, ತುಂಬಾ ಹೊತ್ತು ಹೊರ ಬಂದಿರಲಿಲ್ಲ. ಆದ್ದರಿಂದ ಪಬ್ ನ ಬಾತ್ ರೂಮ್ ಗೆ ಹೋಗಿ ನೋಡಿದಾಗ ಮೇಘರಾಜ್ ಶವವಾಗಿ ಪತ್ತೆಯಾಗಿದ್ದಾರೆ.
ಬ್ಯಾಂಕ್ ವೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದ ಮೇಘರಾಜ್ʼಗೆ ಕೆಲ ವರ್ಷಗಳ ಹಿಂದೆ ಮದುವೆಯಾಗಿ ಆರು ತಿಂಗಳ ಮಗು ಇತ್ತು.. ನಿನ್ನೆ ಪಬ್ ಗೆ ಪಾರ್ಟಿ ಅಂತಾ ಬಂದು ಬಾತ್ ರೂಮ್ ನಲ್ಲಿ ಶವವಾಘಿ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಆರ್ ಆರ್ ನಗರ ಪೊಲೀಸ್ರು, ಸೋಕೋ ಟೀಂ ಭೇಟಿ ಪರಿಶೀಲನೆ ನಡೆಸಿದ್ದು, ಆರ್ ಆರ್ ನಗರ ಪೊಲೀಸ್ರಿಂದ ತನಿಖೆ ಮುಂದುವರೆದಿದೆ.


