ಬ್ಯಾಂಕ್ ದರೋಡೆ ಆರೋಪಿಗಳನ್ನು ಶೀಘ್ರವೇ ಬಂಧನ ಮಾಡ್ತೀವಿ: ಸಚಿವ ಪರಮೇಶ್ವರ್

0
Spread the love

ಬೆಂಗಳೂರು: ಬ್ಯಾಂಕ್ ದರೋಡೆ ಆರೋಪಿಗಳನ್ನು ಶೀಘ್ರವೇ ಬಂಧನ ಮಾಡ್ತೀವಿ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮಂಗಳೂರು ಮತ್ತು ಬೀದರ್ ಎರಡೂ ‌ಪ್ರಕರಣದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದೇವೆ. ಆದಷ್ಟು ಶೀಘ್ರವಾಗಿ ಆರೋಪಿಗಳನ್ನ ಬಂಧನ ಮಾಡ್ತೀವಿ. ಮಂಗಳೂರು ಕೇಸ್‌ನಲ್ಲಿ ಎರಡು ಕಾರು ಬಂದಿರೋ ಮಾಹಿತಿ ಇದೆ.

Advertisement

ಎರಡು ಕೇಸ್ ನಲ್ಲಿ ನಿಖರ ಮಾಹಿತಿಗಳನ್ನ ಪೊಲೀಸರು ಕಲೆ ಹಾಕಿದ್ದಾರೆ. ಈಗಾಗಲೇ 4-5 ಟೀಂಗಳನ್ನ ವಿವಿಧ ರಾಜ್ಯಗಳಿಗೆ ಕಳಿಸಲಾಗಿದೆ. ಎರಡು ಪ್ರಕರಣದಲ್ಲಿ ಬೇರೆ ರಾಜ್ಯದವರು ಮಾಡಿದ್ದಾರೆ ಅನ್ನೋ ಮಾಹಿತಿ ಇದೆ. ಯಾರು ಏನು? ಎಲ್ಲಿಯವರು ಅಂತ ತನಿಖೆಯಿಂದ ಗೊತ್ತಾಗಲಿದೆ ಎಂದರು.

ಈಗಾಗಲೇ ಗೃಹ ಇಲಾಖೆಯಿಂದ ಬ್ಯಾಂಕ್ ಮತ್ತು ATM ಗಳಿಗೆ ಯಾವ ರೀತಿ ಭದ್ರತೆ ಇರಬೇಕು ಅಂತ ರೂಲ್ಸ್ ಕೊಟ್ಡಿದ್ದೇವೆ. ಎಲ್ಲಾ ATM, ಬ್ಯಾಂಕ್ ಗಳಿಗೆ ಸೂಚನೆ ಹೋಗುತ್ತದೆ. ATMಗೆ ಹಣ ಹಾಕೋಕೆ ಬ್ಯಾಂಕ್ ನವರು ಕಾಂಟ್ರಾಕ್ಟ್ ಅವರಿಗೆ ಕೊಟ್ಟಿರುತ್ತಾರೆ. ATMಗೆ ಹಣ ತುಂಬುವಾಗ ಕಡ್ಡಾಯವಾಗಿ ಆರ್ಮ್ ಕಾರ್ಡ್ ಇರಬೇಕು ಅಂತ ನಿಯಮ ಈಗಾಗಲೇ ಇದೆ.

ಬೀದರ್ ಘಟನೆ ಆದಾಗ ಆರ್ಮ್‌ ಗಾರ್ಡ್ ಇರಲಿಲ್ಲ. ಹೀಗಾಗಿ ಘಟನೆ ಆಗಿದೆ. ಮಂಗಳೂರು ಬ್ಯಾಂಕ್ ದರೋಡೆಯಾದಾಗಲು ಕೂಡಾ ಗಾರ್ಡ್ ಇರಲಿಲ್ಲ ಅಂತ ಮಾಹಿತಿ ಇದೆ. ಹೀಗಾಗಿ ಇಲಾಖೆ ಕೊಟ್ಟ ರೂಲ್ಸ್‌ಗಳು ಲ್ಯಾಪ್ಸ್ ಆಗಬಾರದು. ಇಂತಹ ಅವಕಾಶಗಳಿಗೆ ಅಕ್ರಮ ಮಾಡೋರು ಕಾಯ್ತಾ ಇರುತ್ತಾರೆ. ಹೀಗಾಗಿ ಬ್ಯಾಂಕ್‌ನವರು ನಮ್ಮ ಜೊತೆ ಸಹಕಾರ ಕೊಡಬೇಕು ಅಂತ ತಿಳಿಸಿದರು.


Spread the love

LEAVE A REPLY

Please enter your comment!
Please enter your name here