ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ಅಲಗಿಲವಾಡ ಶಾಲೆಯಲ್ಲಿ ಮಹಾತ್ಮ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
Advertisement
ಶಿಕ್ಷಕ ನೇಮೇಶ ಯರಗುಪ್ಪಿ ಮಾತನಾಡಿ, ಈ ಶಾಲೆಗೆ ಹಾಜರಾಗಿ ಒಂದು ವರ್ಷ ಪೂರೈಸಿದ್ದು, ಗ್ರಾಮದ ಗುರು–ಹಿರಿಯರ, ಪಾಲಕರ, ಪ್ರಧಾನ ಗುರುಗಳ ಸಹಕಾರ ನನಗೆ ಬಹಳ ಸಂತೋಷ ತಂದಿದೆ. ಇನ್ನಷ್ಟು ದಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ಶಕ್ತಿ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಧಾನ ಗುರುಗಳಾದ ಹಾಲೇಶ ಜಕ್ಕಲಿ, ಶಿಕ್ಷಣ ಪ್ರೇಮಿಗಳಾದ ಅಕ್ಬರಸಾಬ ಟಪಾಲನವರ, ನಿಜಲಿಂಗಪ್ಪ ಮಾಯಕಾರ, ಗ್ರಾಮದ ಗುರು–ಹಿರಿಯರು, ಮಕ್ಕಳು ಹಾಜರಿದ್ದರು.


