HomeCrime Newsಬಡಾವಣೆ ಪೊಲೀಸರ ಕಾರ್ಯಾಚರಣೆ: ಬೈಕ್ ಕಳ್ಳತನ ಮಾಡಿದ್ದ ಆರೋಪಿ ಬಂಧನ, 4 ಬೈಕ್ʼಗಳ ಜಪ್ತಿ

ಬಡಾವಣೆ ಪೊಲೀಸರ ಕಾರ್ಯಾಚರಣೆ: ಬೈಕ್ ಕಳ್ಳತನ ಮಾಡಿದ್ದ ಆರೋಪಿ ಬಂಧನ, 4 ಬೈಕ್ʼಗಳ ಜಪ್ತಿ

For Dai;y Updates Join Our whatsapp Group

Spread the love

ಗದಗ: ನಗರದ ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮೋಟಾರ್ ಸೈಕಲ್ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿ, ಆರೋಪಿಯನ್ನು ಬಂಧಿಸಿದ್ದಾರೆ.

2025ರ ನವೆಂಬರ್ 5ರಂದು ಹೊಂಡಾ ಆಕ್ಟಿವಾ (KA-26/ED-1568) ಬೈಕ್ ಕಳುವಾಗಿದ್ದ ಕುರಿತು ಗುನ್ನಾ ಸಂಖ್ಯೆ 97/2025, ಕಲಂ 303(2) ಬಿಎನ್‌ಎಸ್-2023 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಗಂಗಾಪೂರ ಪೇಟದ ಶಿವು ನಡಗೇರಿ ಅವರು ಈ ಕುರಿತು ದೂರು ನೀಡಿದ್ದರು.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರೋಹನ್ ಜಗದೀಶ್ ಹಾಗೂ ಉಪಾಧೀಕ್ಷಕರಾದ ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಧೀರಜ್ ಬಿ. ಸಿಂಧೆ ನೇತೃತ್ವದಲ್ಲಿ

ಸಿ.ಪಿ.ಐ ಧೀರಜ್ ಬಿ. ಸಿಂಧೆ, ಪಿ.ಎಸ್.ಐ ಮಾರುತಿ ಎಸ್. ಜೋಗದಂಡಕರ್, ಎಎಸ್ಐ‌ ಐ.ಎಸ್ ಲಮಾಣಿ, ಸಿಬ್ಬಂದಿಗಳಾದ ಎನ್.ಡಿ ಹುಬ್ಬಳ್ಳಿ, ಎಸ್.ಎಚ್ ಡೋಣಿ, ಪರಶುರಾಮ. ಎಚ್ ದೊಡಮನಿ,ಅಶೋಕ ಗದಗ, ನಾಗರಾಜ್ ಬರಡಿ, ಪ್ರವೀಣ್ ಕಲ್ಲೂರ,ಅಕ್ಷಯ ಕುಮಾರ್ ಬದಾಮಿ, ಖಯ್ಯುಮ್ ಲಕ್ಕುಂಡಿ ಒಳಗೊಂಡ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು.

ತಂಡದ ಕಾರ್ಯಾಚರಣೆಯಲ್ಲಿ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಮಧುಸೂಧನ ತಂದೆ ಷಣ್ಮುಖಪ್ಪ ಕುಂತಿಕಲ ವಯಸ್ಸು (25) ಜಾತಿ-ಹಿಂದೂ ಲಿಂಗಾಯತ ಎಂಬಾತ ವೃತ್ತಿಯಲ್ಲಿ ಗೌಂಡಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಪೊಲೀಸರ ವಿಚಾರಣೆ ವೇಳೆ ಆರೋಪಿಯು ಗದಗ ನಗರದಲ್ಲಿ 1, ಸಿಂಧನೂರಿನಲ್ಲಿ 2 ಹಾಗೂ ಗಂಗಾವತಿಯಲ್ಲಿ 1 ಬೈಕ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಇದಲ್ಲದೆ, ಕೊಪ್ಪಳ ಜಿಲ್ಲೆಯಲ್ಲಿ ಮಹಿಳೆಯ ತಾಳಿ ಸರ ಕಳವು ಪ್ರಕರಣದಲ್ಲೂ ಭಾಗಿಯಾಗಿರುವುದು ತಿಳಿದು ಬಂದಿದೆ.

ಆರೋಪಿಯಿಂದ ಹೊಂಡಾ ಆಕ್ಟಿವಾ (₹30,000), ಹೊಂಡಾ ಸಿಬಿ ಶೈನ್ (₹35,000), ಹೊಂಡಾ ಯುನಿಕಾರ್ನ್ (₹45,000) ಮತ್ತು ಹೀರೋ HF ಡಿಲಕ್ಸ್ (₹25,000) ಸೇರಿ ಒಟ್ಟು ₹1,35,000 ಮೌಲ್ಯದ ನಾಲ್ಕು ಮೋಟಾರ್ ಸೈಕಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಕಾರ್ಯಕ್ಷಮತೆಯನ್ನು ಹಿರಿಯ ಅಧಿಕಾರಿಗಳು ಪ್ರಶಂಸಿ, ಬಹುಮಾನ ಘೋಷಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!