ಆನೇಕಲ್:- ಆನೇಕಲ್ ಪಟ್ಟಣದ ಬಹದ್ದೂರ್ ಪುರ ಬಳಿ ನಡುರಸ್ತೆಯಲ್ಲೇ ಪುರಸಭಾ ಸದಸ್ಯನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಜರುಗಿದೆ.
Advertisement
ಆನೇಕಲ್ ಪುರಸಭಾ ಸದಸ್ಯ ರವಿ ಕೊಲೆಯಾದ ಯುವಕ. ಹೊಂಚು ಹಾಕಿ ರವಿ ಅಡ್ಡಗಟ್ಟಿ ಮಾರಕಸ್ತ್ರದಿಂದ ಹಲ್ಲೆ ಮಾಡಲಾಗಿದೆ. ಕೊಲೆ ಬಳಿಕ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಕಳೆದ 15 ದಿನದಿಂದ ಲಾಂಗ್ ಹಿಡಿದು ಯುವಕರು ಓಡಾಡುತ್ತಿದ್ದರು. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿ ಎಚ್ಚರಿಸಿತ್ತು..ಅದೇ ಯುವಕರಿಂದ ಇಂದು ಪುರಸಭಾ ಸದಸ್ಯರ ಕೊಲೆ ನಡೆದಿದೆ.
ಸ್ಥಳಕ್ಕೆ ಆನೇಕಲ್ ಪೊಲೀಸರು ಬೇಟಿ ನೀಡಿ ಪರಿಶೀಲನೆ ಮಾಡಿದ್ದು, ತನಿಖೆ ಮುಂದುವರಿದಿದೆ.