ಕಲಬುರ್ಗಿ:- ನಗರದ ಹೊರವಲಯದ ಮಾಲಗತ್ತಿ ಕ್ರಾಸ್ ಬಳಿ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ರೌಡಿಶೀಟರ್ ಓರ್ವನ ಬರ್ಬರ ಕೊಲೆ ನಡೆದಿರುವ ಘಟನೆ ಜರುಗಿದೆ.
Advertisement
ನಗರದ ಹೊರವಲಯದ ಮಾಲಗತ್ತಿ ಕ್ರಾಸ್ ಬಳಿ ಅಪರಿಚಿತ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
38 ವರ್ಷದ ಖಲೀಲ್ ಅಹಮದ್ ಹತ್ಯೆಗೀಡಾದ ರೌಡಿಶೀಟರ್ ಎನ್ನಲಾಗಿದೆ. ವೈಯಕ್ತಿಯ ದ್ವೇಷದ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೋಸ್ಟ್ ವಾಂಟೆಡ್ ಆಗಿದ್ದ ಖಲೀಲ್, ಹಲವು ವರ್ಷಗಳಿಂದ ಪೊಲೀಸರಿಗೆ ಬೇಕಾಗಿದ್ದ ಎನ್ನಲಾಗಿದೆ.
ಇನ್ನೂ ಖಲೀಲ್ ಸ್ನೇಹಿತ ಅಲಿಲ್ ಪಟೇಲ್ ಮೇಲೂ ಹಲ್ಲೆ ನಡೆದಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.