ಕಲಬುರ್ಗಿ:- ಚಾಕುವಿನಿಂದ ಇರಿದು ಪದವಿ ವಿದ್ಯಾರ್ಥಿಯ ಬರ್ಬರ ಕೊಲೆ ಮಾಡಿರುವ ಘಟನೆ ಕಲಬುರಗಿ ಹೊರವಲಯದ ನಾಗನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಸುಮೀತ್ ಎಂಬ ಯುವಕ ನಾಲ್ಕೈದು ದಿನಗಳ ಹಿಂದೆಯಷ್ಟೇ ತಾಯಿಯೊಂದಿಗೆ ಊರಿಗೆ ಬಂದಿದ್ದ. ಯುವತಿಯೊಬ್ಬಳ ಜೊತೆ ಸುಮಿತ್ ಸೋದರ ಸಚಿನ್ ಸ್ನೇಹ ಹೊಂದಿದ್ದ. ಸಚಿನ್ ಮೇಲಿನ ಕೋಪಕ್ಕೆ ಸುಮಿತ್ ಜೊತೆ ಯುವತಿ ಕಡೆಯವರು ಗಲಾಟೆ ಮಾಡಿದ್ದಾರೆ. ಇದೇ ವಿಚಾರಕ್ಕೆ ಸುಮಿತ್ ತಾಯಿ ಜೊತೆ ನಾಲ್ಕೈದು ಜನರು ಗಲಾಟೆ ಮಾಡಿದ್ದರು.
ಈ ಗಲಾಟೆ ವೇಳೆ 19 ವರ್ಷದ ಸುಮೀತ್ ಮಲ್ಲಾಬಾದ್ ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಯುವತಿಯ ಕುಟುಂಬಸ್ಥರಿಂದ ಸಚಿನ್ ಸೋದರ ಸುಮೀತ್ ಹತ್ಯೆ ನಡೆದಿದೆ. ಕಲಬುರಗಿಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



