ಗದಗ:- ಭಾರೀ ಮಳೆಯಿಂದಾಗಿ ಹಳ್ಳದ ನೀರಲ್ಲಿ ಕೊಚ್ಚಿ ಹೋಗಿದ್ದ ಆರೋಗ್ಯ ಇಲಾಖೆಯ ಸಿಬ್ಬಂದಿ ಇಂದು ಶವವಾಗಿ ಪತ್ತೆಯಾಗಿದ್ದಾರೆ.
ಎಸ್, ನಿನ್ನೆ ಮಂಗಳವಾರ ಗದಗ ಜಿಲ್ಲೆಯ ರೋಣ ತಾಲೂಕಿನ ಯಾ.ಸಾ.ಹಡಗಲಿಯ ಮುಚ್ಚಣಕಿಯ ಹಳ್ಳದ ನೀರಿನಲ್ಲಿ ಬೈಕ್ ಸಮೇತ ಮೂವರು ಆರೋಗ್ಯ ಇಲಾಖೆಯ ಸಿಬ್ಬಂದಿ ಕೊಚ್ಚಿ ಹೋಗಿದ್ದರು. ಇದರಲ್ಲಿ ಪವಾಡ ಎಂಬಂತೆ ಇಬ್ಬರು ಬಚಾವ್ ಆಗಿದ್ದರು, ಓರ್ವ ಸಿಬ್ಬಂದಿ ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರು. ಇಂದು ಬೆಳಿಗ್ಗೆ ಬಸಮ್ಮ ಗುರಿಕಾರ್ (35) ಶವ ಪತ್ತೆಯಾಗಿದೆ. ಮೃತ ಬಸಮ್ಮ ಬೆಳವಣಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು.
ನಿನ್ನೆ ಸಿಎಚ್ ಒ ಬಸವಾರಾಜ್ ಕಡಪಟ್ಟಿ, ಆರೋಗ್ಯ ಸಹಾಯಕ ವಿರೇಶ್ ಹಿರೇಮಠ ಹಾಗೂ ಬಸಮ್ಮ ಗುರಿಕಾರ್ ಯಾ.ಸಾ ಹಡಗಲಿಯಿಂದ ಬೆಳವಣಕಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೊರಟಿದ್ದರು. ಈ ವೇಳೆ ಹಳ್ಳದ ನೀರಲ್ಲಿ ಕೊಚ್ಚಿ ಹೋಗಿದ್ದರು. ಇಬ್ಬರು ಸಿಬ್ಬಂದಿ ಪಾರಾಗಿದ್ದರೇ, ಬಸಮ್ಮ ನೀರು ಪಾಲಾಗಿದ್ದಳು.
ಇಂದು ಗ್ರಾಮಸ್ಥರ ನೆರವಿನಿಂದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಕಾರ್ಯಚರಣೆ ನಡೆಸಿದ ಪರಿಣಾಮ ಹಳ್ಳದ ಮುಳ್ಳಿನ ಕಂಟಿಯಲ್ಲಿ ಸಿಲುಕಿದ್ದ ಬಸಮ್ಮ ಶವವಾಗಿ ಪತ್ತೆಯಾಗಿದ್ದಾರೆ.
ಅಗ್ನಿಶಾಮಕ ದಳ ಹಾಗೂ ಗ್ರಾಮಸ್ಥರಿಂದ ಮೃತದೇಹ ಹೊರಗೆ ತೆಗೆಯಲಾಗಿದ್ದು, ಸ್ಥಳಕ್ಕೆ ಡಿಎಚ್ ಒ ಎಸ್ ಎಸ್ ನೀಲಗುಂದ, ತಹಸೀಲ್ದಾರ್ ನಾಗರಾಜ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ರೋಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.