ವಿಜಯಸಾಕ್ಷಿ ಸುದ್ದಿ, ಗದಗ: ವಿಶ್ವದ ಶ್ರೇಷ್ಠ ದಾರ್ಶನಿಕ, ಮಹಾನ್ ಮಾನವತಾವಾದಿ, ಕ್ರಾಂತಿಯೋಗಿ, ಸಾಮಾಜಿಕ, ಧಾರ್ಮಿಕ ಸಮಾನತೆಗೆ ಶ್ರಮಿಸಿದ ಬಸವಣ್ಣನವರ ಜಯಂತಿಯನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಗದಗ ಜಿಲ್ಲಾ ಘಟಕವು ಶೃದ್ಧಾಭಕ್ತಿಯೊಂದಿಗೆ ಆಚರಿಸಿತು.
ನಗರದ ವೀರಶೈವ ಜನರಲ್ ವಾಚನಾಲಯದ ಆವರಣದಲ್ಲಿರುವ ಮಹಾಸಭಾದ ಕಾರ್ಯಾಲಯದಲ್ಲಿ ಬಸವಣ್ಣನವರ ಅಲಂಕೃತ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಮಹಾಸಭಾದ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಸಂಗನಗೌಡ ಪಾಟೀಲ, ಜಿಲ್ಲಾಧ್ಯಕ್ಷ ಶರಣಬಸಪ್ಪ ಗುಡಿಮನಿ, ಉಪಾಧ್ಯಕ್ಷ ಬಸವರಾಜ ಅಂಗಡಿ, ಭೀಮರಡ್ಡೇಪ್ಪ ರಡ್ಡೇರ, ವಿಜಯಲಕ್ಷ್ಮೀ ಮಾನ್ವಿ, ಪ್ರಧಾನ ಕಾರ್ಯದರ್ಶಿ ಮುರುಘರಾಜೇಂದ್ರ ಬಡ್ನಿ, ಕೋಶಾಧ್ಯಕ್ಷ ಚನ್ನವೀರಪ್ಪ ಹುಣಶಿಕಟ್ಟಿ, ಕಾರ್ಯದರ್ಶಿ ಕಾಶಪ್ಪ ಗದಗಿನ, ಸಿದ್ಧಲಿಂಗಪ್ಪ ಪಟ್ಟಣಶೆಟ್ಟಿ, ಜಿಲ್ಲಾ ತಾಲೂಕಾ ಪದಾಧಿಕಾರಿಗಳಾದ ಶಂಭು ಕಾರಕಟ್ಟಿ, ಚನ್ನಬಸಪ್ಪ ಅಕ್ಕಿ, ಶ್ರೀಶೈಲಪ್ಪ ಚಳಗೇರಿ, ಉಮಾ ಕಾತರಕಿ, ಸುಪರ್ಣಾ ಬ್ಯಾಹಟ್ಟಿ, ರಾಜು ಕುರಡಗಿ, ತೇಜಿಗೌಡ್ರ, ಕುಂದಗೋಳ, ನಾರಾಯಣಪೂರ ಮುಂತಾದವರಿದ್ದರು.
ನಗರದ ಗ್ರೇನ್ ಮಾರುಕಟ್ಟೆ ಬಳಿ ಇರುವ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿದ ಮಹಾಸಭಾದ ಪದಾಧಿಕಾರಿಗಳು, ಆಜೀವ ಸದಸ್ಯರು ಗದಗ ಜಿಲ್ಲಾಡಳಿತ ಏರ್ಪಡಿಸಿದ್ದ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಸಾಥ್ ನೀಡಿದರು.