HomeGadag Newsನಾಳೆ ಬಸವ ಜಯಂತಿ ಮೆರವಣಿಗೆ

ನಾಳೆ ಬಸವ ಜಯಂತಿ ಮೆರವಣಿಗೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು, ಜಗಜ್ಯೋತಿ, ಮಹಾಮಾನವತಾವಾದಿ, ಇಷ್ಟಲಿಂಗ ಜನಕ, ಲಿಂಗಾಯತ ಧರ್ಮ ಸಂಸ್ಥಾಪಕ ಬಸವಣ್ಣನವರ 920ನೇ ಜಯಂತಿ ಕಾರ್ಯಕ್ರಮದ ಮೆರವಣಿಗೆಗೆ ಬುಧವಾರ ಮುಂಜಾನೆ 9 ಗಂಟೆಗೆ ಪೂಜ್ಯ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರು ಚಾಲನೆ ನೀಡುವರು.

ಮೆರವಣಿಗೆಯು ಶ್ರೀಮಠದಿಂದ ಪ್ರಾರಂಭವಾಗಿ ಮಹೇಂದ್ರಕರ ವೃತ್ತ, ಹುಯಿಲಗೋಳ ವೃತ್ತ, ಬಸವೇಶ್ವರ ವೃತ್ತ, ಕೆ.ಎಚ್. ಪಾಟೀಲ ವೃತ್ತ, ಮಾಳಶೆಟ್ಟಿ ವೃತ್ತ, ರೋಟರಿ ವೃತ್ತ, ಮಹಾತ್ಮ ಗಾಂಧಿ ವೃತ್ತದ ಮೂಲಕ ತೋಂಟದಾರ್ಯ ಮಠಕ್ಕೆ ತಲುಪುವುದು. ನಂತರ ಗದಗ ಜಿಲ್ಲಾಡಳಿತ ವತಿಯಿಂದ ಶ್ರೀಮಠ ಶಿವಾನುಭವ ಮಂಟಪದಲ್ಲಿ ಮುಂಜಾನೆ 11 ಗಂಟೆಗೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

ಈ ಮೆರವಣಿಗೆಯಲ್ಲಿ ಬಸವಪರ ಸಂಘಟನೆಗಳ ಸದಸ್ಯರು ಹಾಗೂ ಶ್ರೀಮಠದ ಸದ್ಭಕ್ತರು ಪಾಲ್ಗೊಳ್ಳಬೇಕೆಂದು ಸಂಘಟಿಕರ ಪರವಾಗಿ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ, ಜಗದ್ಗುರು ತೋಂಟದಾರ್ಯ ಮಠದ ಜಾತ್ರಾ ಸಮಿತಿ-2025ರ ಅಧ್ಯಕ್ಷರಾದ ಡಾ. ಧನೇಶ ದೇಸಾಯಿ, ಬಸವಕೇಂದ್ರದ ಅಧ್ಯಕ್ಷರಾದ ಕೆ.ಎಸ್. ಚಟ್ಟಿ, ಬಸವದಳದ ಅಧ್ಯಕ್ಷರಾದ ವ್ಹಿ.ಕೆ. ಕರೇಗೌಡ್ರ ಹಾಗೂ ಪ್ರಕಾಶ ಅಸುಂಡಿಯವರು ವಿನಂತಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!